ADVERTISEMENT

ಅಧಿಕಾರ ಇಲ್ಲದಿದ್ದರೂ ಸೇವೆ ಮಾಡಬಹುದು: ಶಾಸಕ ನಿಖಿಲ್ ಕತ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:31 IST
Last Updated 30 ಅಕ್ಟೋಬರ್ 2025, 2:31 IST
ಹುಕ್ಕೇರಿ ಪುರಸಭೆ ಸದಸ್ಯರ ಅಧಿಕಾರ ಅವಧಿಯ ಕೊನೆಯ ದಿನ ಸದಸ್ಯರನ್ನು ಉದ್ಧೇಶಿಸಿ ಶಾಸಕ ನಿಖಿಲ್ ಕತ್ತಿ ಸೋಮವಾರ ಮಾತನಾಡಿದರು.
ಹುಕ್ಕೇರಿ ಪುರಸಭೆ ಸದಸ್ಯರ ಅಧಿಕಾರ ಅವಧಿಯ ಕೊನೆಯ ದಿನ ಸದಸ್ಯರನ್ನು ಉದ್ಧೇಶಿಸಿ ಶಾಸಕ ನಿಖಿಲ್ ಕತ್ತಿ ಸೋಮವಾರ ಮಾತನಾಡಿದರು.   

ಹುಕ್ಕೇರಿ: ಅಧಿಕಾರ ಇದ್ದಾಗಲೇ ಜನರ ಸೇವೆ ಮಾಡಬೇಕೆಂದಿಲ್ಲ. ಅಧಿಕಾರ ಇಲ್ಲದಾಗಲೂ ಸೇವೆ ಸಲ್ಲಿಸಿ ಜನರ ಮನ್ನಣೆ ಗಳಿಸಲು ಸಾಧ್ಯ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲು ಸೋಮವಾರ ಕಚೇರಿಗೆ ಆಗಮಿಸಿದಾಗ, ಸದಸ್ಯರ ಆಡಳಿತಾವಧಿಯ ಕೊನೆಯ ದಿನವೆಂದು ತಿಳಿದಾಗ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ, ವಸತಿಹೀನರಿಗೆ ಸಿಗಬಹುದಾದ ಆಶ್ರಯ ಮನೆಯ ಕುರಿತು, ಮೂಲಭೂತ ಸೌಲಭ್ಯ ಮತ್ತು ಸರ್ಕಾರದಿಂದ ಬರಬಹುದಾದ ಅನುದಾನದ ಕುರಿತು ಅಧ್ಯಕ್ಷ ಇಮ್ರಾನ ಮೊಮೀನ್ ಸೇರಿ ಇತರ ಸದಸ್ಯರ ಜತೆ ಚರ್ಚಿಸಿದರು.

ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಮತ್ತು ಜೆಇ ರಾಜು ಪಟ್ಟಣಶೆಟ್ಟಿ ಪೂರಕ ಮಾಹಿತಿ ನೀಡಿದರು. ಮುಂದಿನ ಆಡಳಿತ ಮಂಡಳಿ ರಚನೆಯಾಗುವವರೆಗೆ ಸದಸ್ಯರು ಪಟ್ಟಣದ ಅಭಿವೃದ್ಧಿ ಮತ್ತು ಸ್ವಚ್ಛತೆ ದೃಷ್ಟಿಯಿಂದ ಸಹಕಾರ ನೀಡುವಂತೆ ಸಲಹೆ ನೀಡಿದರು.

ADVERTISEMENT

ಅಧ್ಯಕ್ಷ ಇಮ್ರಾನ ಮೊಮೀನ್, ಉಪಾಧ್ಯಕ್ಷೆ ಜ್ಯೋತಿ ಬಡಿಗೇರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ತಳವಾರ, ಸದಸ್ಯರಾದ ಮಹಾವೀರ ನಿಲಜಗಿ, ರಾಜು ಮುನ್ನೋಳಿ, ರುಕ್ಮಿಣಿ ಹಳಜೋಳ, ಅಣ್ಣಾಗೌಡ ಪಾಟೀಲ್, ಭೀಮಶಿ ಗೋರಖನಾಥ, ಸದಾಶಿವ ಕರೆಪ್ಪಗೋಳ, ಚಂದ್ರು ಮುತ್ನಾಳ, ಶಿವಲಿಂಗಪ್ಪ ಗಂಧ, ಪ್ರಕಾಶ ಪಟ್ಟಣಶೆಟ್ಟಿ, ಸಲಿಂ ಕಳಾವಂತ, ಮ್ಯಾನೇಜರ್ ಮಲ್ಲಿಕಾರ್ಜುನ ಗುಡಕೇತರ, ಪರಿಸರ ಎಂಜನಿಯರ್ ರೇವತಿ ರಂಗನಾಥ, ಕಲಗೌಡ ಪಾಟೀಲ, ಸಿಬ್ಬಂದಿ ಇದ್ದರು.

ಹುಕ್ಕೇರಿ ಪುರಸಭೆ ಸದಸ್ಯರ ಅಧಿಕಾರ ಅವಧಿಯ ಕೊನೆಯ ದಿನ ಸದಸ್ಯರನ್ನು ಉದ್ಧೇಶಿಸಿ ಶಾಸಕ ನಿಖಿಲ್ ಕತ್ತಿ ಸೋಮವಾರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.