ಬೆಳಗಾವಿ: ಹೃದ್ರೋಗದಿಂದ ಬಳಲುತ್ತಿದ್ದ 85 ವರ್ಷ ವಯಸ್ಸಿನ ಮದ್ರಾಸ್ ರೆಜಿಮೆಂಟ್‌ನ ಹಿರಿಯ ನಿವೃತ್ತ ಗೌರವ ಕ್ಯಾಪ್ಟನ್ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತೆಯನ್ನು ಇಲ್ಲಿನ ಕೆಎಲ್‍ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ತಜ್ಞವೈದ್ಯರು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಏಳೇ ದಿನಗಳಲ್ಲಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಮೂಡಲಗಿ ತಾಲ್ಲೂಕಿನ ಕುಲಗೋಡ ಗ್ರಾಮದವರಾದ ಕ್ಯಾಪ್ಟನ್ ಗುರಪ್ಪ ಬಾಗಿಮನಿ ಅವರಗೆ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ.ಡಿ.ಎಸ್.ದರ್ಶನ ಮತ್ತು ಅವರ ತಂಡ ಯಶಸ್ವಿಯಾಗಿ ನೆರವೇರಿಸಿದೆ. ಸತತ ಮೂರು ಗಂಟೆಗಳ ಕಾಲ ನಡೆದ ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಅಪಧಮನಿಗಳಲ್ಲಿ ಉಂಟಾದ ತೊಂದರೆಯನ್ನು ಸರಿಪಡಿಸಲಾಯಿತು. ಕೇವಲ ಮೂರೇ ದಿನದಲ್ಲಿ ರೋಗಿಯು ಹಾಸಿಗೆಯಿಂದ ಎದ್ದು, ನಡೆದಾಡಲು ಸಾಧ್ಯವಾಯಿತು.
ವಯಸ್ಸಾದ ಕಾರಣ ಅವರ ಮೂಳೆಗಳು ದುರ್ಬಲಗೊಂಡಿದ್ದಲ್ಲದೇ ದುರ್ಬಲ ಹೃದಯ ಸ್ಥಿತಿಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿತ್ತು ಎಂದ ಡಾ. ದರ್ಶನ, ಕಳೆದ 3 ದಶಕಗಳ ತಮ್ಮ ವೃತ್ತಿಜೀವನದಲ್ಲಿ ಅವರು ನಿರ್ವಹಿಸಿದ ಅತ್ಯಂತ ವಯಸ್ಸಾದ ರೋಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಡಾ.ಪಾರೀಶ್ವನಾಥ ಪಾಟೀಲ ಹಾಗೂ ಡಾ.ರಣಜಿತ ನಾಯಕ, ಅರವಳಿಕೆ ತಜ್ಞ ಡಾ.ಶರಣಗೌಡ ಪಾಟೀಲ ಸಹಕಾರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.