ADVERTISEMENT

ಪಾಕಿಸ್ತಾನ ಪರ ಘೋಷಣೆ: ನೈತಿಕ‌ ಹೊಣೆ ಹೊತ್ತು ರಾಜೀನಾಮೆ‌‌‌ ನೀಡಿ; ಯತ್ನಾಳ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 12:48 IST
Last Updated 5 ಮಾರ್ಚ್ 2024, 12:48 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಬೆಳಗಾವಿ: 'ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನಿಜ ಎಂದು ಈಗ ಸರ್ಕಾರ ಒಪ್ಪಿಕೊಂಡಿದೆ. ಘೋಷಣೆ ಕೂಗಿಯೇ ಇಲ್ಲ ಎಂದು ವಾದಿಸಿದವರು ನೈತಿಕ ಹೊಣೆ‌ ಹೊತ್ತು ರಾಜೀನಾಮೆ ಕೊಡಬೇಕು. ಮಂತ್ರಿಯಾಗಿ ಮುಂದುವರೆಯಲು ಅವರಿಗೆ ನೈತಿಕ ಇಲ್ಲ' ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸಚಿವ ಪ್ರಿಯಾಂಕ ಖರ್ಗೆ ಮೊದಲಿನಿಂದಲೂ ವಿವಾದಾತ್ಮಕವಾಗಿ ಹೇಳಿಕೆ ಕೊಡುತ್ತಿದ್ದಾರೆ. ಒಂದು ವರ್ಗವನ್ನು ಖುಷಿಪಡಿಸಲು ಹಿಂದೂ ಸಮಾಜದ ಅಪಮಾನ ಮಾಡುವುದು ಅವರಿಗೆ ಶೋಕಿ ಆಗಿದೆ. ಸದನದಲ್ಲಿ ಮಂತ್ರಿಯಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದೂ ಗೊತ್ತಿಲ್ಲ. ಇದೇ ಕಾರಣಕ್ಕೆ ಗೃಹ ಸಚಿವ ಪರಮೇಶ್ವರ ಅವರು ಕೂಡ ಪ್ರಿಯಾಂಕ ಖರ್ಗೆ ಅಪ್ರಬುದ್ಧ ಎಂದಿದ್ದಾರೆ' ಎಂದು ದೂರಿದರು.

'ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಡ್ಡಾ ಅವರು ಸೂಕ್ಷ್ಮ ವಿಷಯಗಳನ್ನು‌ ತಿಳಿಸಿದ್ದಾರೆ. ಮೋದಿಯವರ ನೇತೃತ್ವದಲ್ಲಿ 400 ಸೀಟ್ ಗೆಲ್ಲುವ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ' ಎಂದರು.

ADVERTISEMENT

'ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರಿಗೆ ಕೆಲಸ ಮಾಡುತ್ತೇನೆ' ಎಂದರು.

'ಕರ್ನಾಟಕದಿಂದ ಪೀಡಾ ಹೋಗಲಿ ಎಂದು ಕೆಲವರು ನನ್ನನ್ನು ಲೋಕಸಭೆಗೆ ಕಳುಹಿಸುವ ಹೇಳಿಕೆ‌ ನೀಡುತ್ತಾರೆ. ನಾನು ಇಲ್ಲೇ ಇದ್ದು ಎಲ್ಲರನ್ನೂ ರಿಪೇರಿ ಮಾಡುತ್ತೇನೆ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.