ADVERTISEMENT

ಬೆಳಗಾವಿ | ‘ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ನವೋಲ್ಲಾಸ’

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 13:45 IST
Last Updated 2 ಜುಲೈ 2020, 13:45 IST
ಪರಮಾನಂದವಾಡಿಯಲ್ಲಿ ಬುಧವಾರ ನಡೆದ ‘ಪ್ರತಿಜ್ಞೆ’ ಕಾರ್ಯಕ್ರಮದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು
ಪರಮಾನಂದವಾಡಿಯಲ್ಲಿ ಬುಧವಾರ ನಡೆದ ‘ಪ್ರತಿಜ್ಞೆ’ ಕಾರ್ಯಕ್ರಮದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು   

ಪರಮಾನಂದವಾಡಿ: ‘ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅಧಿಕಾರ ಸ್ವೀಕರಿಸಿರುವುದದಿಂದ ಪಕ್ಷದ ಕಾರ್ಯಕರ್ತರಲ್ಲಿ ನವೋಲ್ಲಾಸ ಉಂಟಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಎಂ. ಅಂಬಿ ಹೇಳಿದರು.

ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಬುಧವಾರ ನಡೆದ ‘ಪ್ರತಿಜ್ಞೆ’ ನೇರಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ, ಸಿಹಿ ಹಂಚಿ ಅವರು ಮಾತನಾಡಿದರು.

‘ಕಾಂಗ್ರೆಸ್ ಬಡವರು ಮತ್ತು ದಲಿತರ ಏಳಿಗೆಗೆ ಶ್ರಮಿಸಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಪಕ್ಷವಾಗಿದೆ. ಸಂಘಟನೆಗೆ ಶ್ರಮಿಸಿದವರಿಗೆ ಉನ್ನತ ಹುದ್ದೆಯನ್ನು ಪಕ್ಷ ನೀಡುತ್ತಾ ಬಂದಿದೆ. ನೂತನ ಅಧ್ಯಕ್ಷರು ಉತ್ಸಾಹದ ಚಿಲುಮೆಯಾಗಿದ್ದಾರೆ’ ಎಂದರು.

ADVERTISEMENT

ಮುಖಂಡರಾದ ಬಾಹುಬಲಿ ಗಂಡೋಶಿ, ಸಂಜೀವಕುಮಾರ್ ಭಾಂಡಿ, ಪ್ರತಾಪ್ ಕಾಂಬಳೆ, ಎ.ಜಿ. ಮುಲ್ಲಾ, ಚಿದಾನಂದ ಸಾಲೋಟಗಿ, ನಿಂಗಪ್ಪ ಮುರಗನ್ನವರ, ಪಿ.ಎಸ್. ಮಿರ್ಜೆ, ವಸಂತ ಸುತಾರ, ನಜೀರ್ ತಾಂಬೋಳಿ, ಸುರೇಶ್ ಜಕಾತೆ, ದಶರಥ ಕುರಣೆ, ಸುರೇಶ ಹೆಳವಿ, ನೂರ ಡಾಂಗೆ, ಬಾಳು ಸನದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.