
ಪ್ರಜಾವಾಣಿ ವಾರ್ತೆಸಾಂದರ್ಭಿಕ ಚಿತ್ರ
– ಗೆಟ್ಟಿ ಚಿತ್ರ
ಅಥಣಿ: ‘ಪಟ್ಟಣದ ಪ್ಯಾರಾಮೆಡಿಕಲ್ ಕಾಲೇಜ್ ಹಾಗೂ ಸಂಶೋಧನಾ ಕೇಂದ್ರವೊಂದರ ಉಪನ್ಯಾಸಕ, ಅದೇ ಕಾಲೇಜಿನಲ್ಲಿ ಓದುತ್ತಿದ್ದ ತಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ’ ಎಂದು ಆರೋಪಿಸಿ ವಿದ್ಯಾರ್ಥಿನಿಯ ತಂದೆ ದೂರು ದಾಖಲಿಸಿದ್ದಾರೆ.
ಕಾಗವಾಡ ತಾಲ್ಲೂಕಿನ ಉಗಾರ ಮೂಲದ ಉಪನ್ಯಾಸಕ ತಮ್ಮ ಮಗಳಿಗೆ ಪ್ರೀತಿಸಿ, ಮದುವೆ ಆಗುವ ಆಸೆ ತೋರಿಸಿ ಜ. 8ರಂದು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಿಪಿಐ ಸಂತೋಷ ಹಳ್ಳೂರು ಹಾಗೂ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು, ತನಿಖೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.