ADVERTISEMENT

ಅವಿಭಕ್ತ ಕುಟುಂಬದಲ್ಲಿ ನೆಮ್ಮದಿ: ಬಿ.ಆರ್.ಗಂಗಪ್ಪನವರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 4:58 IST
Last Updated 17 ಜನವರಿ 2026, 4:58 IST
ಐಗಳಿಯಲ್ಲಿ ಶುಕ್ರವಾರ ಪಾಟೀಲ ಮನೆತನದಿಂದ ಸಾಧಕರಿಗೆ ಗುರುಶ್ರೀ ಪ್ರಶಸ್ತಿ ಹಾಗೂ ಸನ್ಮಾನ ಸಮಾರಂಣ ಜರುಗಿತು 
ಐಗಳಿಯಲ್ಲಿ ಶುಕ್ರವಾರ ಪಾಟೀಲ ಮನೆತನದಿಂದ ಸಾಧಕರಿಗೆ ಗುರುಶ್ರೀ ಪ್ರಶಸ್ತಿ ಹಾಗೂ ಸನ್ಮಾನ ಸಮಾರಂಣ ಜರುಗಿತು     

ಐಗಳಿ: ‘ಅವಿಭಕ್ತ ಕುಟುಂಬದಲ್ಲಿ ಸಿಗುವ ಪ್ರೀತಿ, ನೆಮ್ಮದಿ ಮತ್ತೊಂದರಲ್ಲಿ ಇಲ್ಲ. ಇತ್ತೀಚೆಗೆ ಕುಟುಂಬಗಳಲ್ಲಿ ಕಲಹ, ಅಸುಹೆ ಜಾಸ್ತಿಯಾಗಿದೆ. ಭಿನ್ನಾಭಿಪ್ರಾಯ ಬದಿಗಿಟ್ಟು ಅವಿಭಕ್ತ ಕುಟುಂಬದಲ್ಲಿ ಬಾಳಬೇಕು’ ಎಂದು ನಿವೃತ್ತ ಡಿಡಿಪಿಐ ಬಿ.ಆರ್.ಗಂಗಪ್ಪನವರ ಹೇಳಿದರು.

ಇಲ್ಲಿನ ಪಾಟೀಲ ಮನೆತನದವರಿಂದ ಪ್ರತಿ ನೀಡುವ ‘ಗುರು ಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಸಂಸ್ಕಾರದಲ್ಲಿ ಬೆಳೆದ ಕುಟುಂಬದ ಸದಸ್ಯರಲ್ಲಿ ಭಾವನಾತ್ಮಕ ಸಂಬಂದ ಇರುತ್ತದೆ. ಹಲವರು ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದರಿಂದ ಸಾಮರಸ್ಯ ಹದಗೆಡುತ್ತದೆ. ಮಕ್ಕಳಿಗೆ ಹಿರಿಯರ ಮಾರ್ಗದರ್ಶನ ಸಿಗದೇ ಅನ್ಯ ಮಾರ್ಗ ಹಿಡಿಯುವುದು ಸಾಮಾನ್ಯವಾಗಿದೆ’ ಎಂದರು.

‘ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ದೇಶಾಭಿಮಾನ ಬೆಳೆಯಬೇಕೆಂದರೆ ಅವಿಭಕ್ತ ಕುಟುಂಬಗಳು ಉಳಿಯಬೇಕು’ ಎಂದರು.

ADVERTISEMENT

ಉಮರಾಣಿಯ ಮಾತೋಶ್ರೀ ಅಕ್ಕಮಹಾದೇವಿ ತಾಯಿ, ತುಂಗಳದ ಸಿದ್ದಲಿಂಗ ಶಾಂಭವಿ ಆಶ್ರಮದ ಅನುಸೂಯಾ ತಾಯಿ ಆಶೀರ್ವಚನ ನೀಡಿದರು. ನಿವೃತ್ತ ಶಿಕ್ಷಕ ನಿಂಗನಗೌಡ ಪಾಟೀಲ, ತುಬಚಿಯ ಮಹಾದೇವ ಮಹಾರಾಜರು, ಯಲಿಹಡಲಗಿಯ ಬಾಳು ಮಹಾರಾಜರು ಮಾತನಾಡಿದರು. ಪಾಟೀಲ ಸಹೋದರರು ಗುರುಶ್ರೀ ಪ್ರಶಸ್ತಿ ನೀಡಿದರು. ಸಾಧಕರಾದ ಬಸವಂತ ಗುಡ್ಡಾಪೂರ, ಬಸವರಾಜ ಚಮಕೇರಿ, ಅಣ್ಣಾಸಾಬ ತೆಲಸಂಗ, ಮಹಾದೇವ ಹಾಲಳ್ಳಿ, ಎಸ್.ಎಂ.ಜನಗೌಡ ಅವರನ್ನು ಸತ್ಕರಿಸಿದರು.

ಗುರುಪಾದಗೌಡ ಪಾಟೀಲ ದಂಪತಿ ಗದ್ದುಗೆ ಪೂಜೆಯನ್ನು ಮಲಗೌಡ ಪಾಟೀಲ ದಂಪತಿ ನೆರವೇರಿಸಿದರು. ಶಂಕರ ಮಹಾರಾಜರು ದಾಸಬೋಧೆ ಓದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.