ADVERTISEMENT

ಪತ್ನಿಗೆ ನಾಯಿಯಿಂದ ಸಂಭೋಗ ಮಾಡಿಸಿದ್ದ ಪತಿ!

ಅಪರಾಧಿಗೆ ಶಿಕ್ಷೆ ಕಾಯ್ದಿರಿಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 13:42 IST
Last Updated 9 ಏಪ್ರಿಲ್ 2019, 13:42 IST
   

ಬೆಳಗಾವಿ: ಪತ್ನಿಯೊಂದಿಗೆ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದುದ್ದಲ್ಲದೇ, ನಾಯಿಮರಿಯಿಂದ ಸಂಭೋಗ ಮಾಡಿಸಿದ್ದ ವ್ಯಕ್ತಿಯು ಅಪರಾಧಿ ಎಂದು ತೀರ್ಮಾನಿಸಿರುವ ಇಲ್ಲಿನ 8ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ, ಶಿಕ್ಷೆಯ ಪ್ರಮಾಣವನ್ನು ಏ. 10ಕ್ಕೆ ಪ್ರಕಟಿಸಲಿದೆ.

ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಟಕೋಳ ಠಾಣೆ ವ್ಯಾಪ್ತಿಯಲ್ಲಿ 2017ರ ಮಾರ್ಚ್ 22ರಂದು ಘಟನೆ ನಡೆದಿದೆ. 2010ರಲ್ಲಿ ಮದುವೆಯಾಗಿದ್ದ ವ್ಯಕ್ತಿ 2015ರಿಂದ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ‘ಹೇಳಿದಂತೆ ಕೇಳಬೇಕು. ಇಲ್ಲವಾದಲ್ಲಿ ಮನೆ ಬಿಟ್ಟು ಹೋಗು’ ಎಂದು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದ.

‘2016ರ ಡಿಸೆಂಬರ್‌ನಿಂದ ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಮಲಗಿರುತ್ತಿದ್ದ ಪತ್ನಿಯನ್ನು ಎಬ್ಬಿಸಿ, ಮೊಬೈಲ್‌ನಲ್ಲಿ ಅನೈಸರ್ಗಿಕ ವಿಡಿಯೊಗಳನ್ನು ತೋರಿಸಿ, ನೀನು ಈ ವಿಡಿಯೊದಲ್ಲಿದ್ದ ಹಾಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು. ವಿರೋಧಿಸುತ್ತಿದ್ದ ಪತ್ನಿಗೆ ಜೀವ ಬೆದರಿಕೆ ಹಾಕಿ, ವಿಕೃತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಪಕ್ಕದ ಮನೆಯಲ್ಲಿದ್ದ 5–6 ತಿಂಗಳಿನ ನಾಯಿಮರಿ ತೆಗೆದುಕೊಂಡು ಬಂದು, ನಾಯಿಯ ಶಿಶ್ನವನ್ನು ಕೈಯಿಂದ ಪತ್ನಿಯ ಗುಪ್ತಾಂಗದೊಳಗೆ ಒತ್ತಾಯಪೂರ್ವಕವಾಗಿ ಹಾಕಿದ್ದ. 15 ದಿನಗಳಲ್ಲಿ 3 ಬಾರಿ ನಾಯಿ ಮರಿಯಿಂದ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿಸಿದ್ದ’.

ADVERTISEMENT

‘2017ರ ಮಾರ್ಚ್‌ 22ರ ರಾತ್ರಿ ಮತ್ತೆ ನಾಯಿ ತಂದಿದ್ದ. ನಾಯಿಯೊಂದಿಗೆ ಮಲಗಿದರೆ ಮಾತ್ರ ಮನೆಯಲ್ಲಿರು, ಇಲ್ಲದಿದ್ದರೆ ಹೋಗು ಎಂದು ಹಲ್ಲೆ ನಡೆಸಿದ್ದ. ಒಪ್ಪದಿದ್ದಾಗ ಮೂವರು ಮಕ್ಕಳೊಂದಿಗೆ ಪತ್ನಿಯನ್ನು ರಾತ್ರೋರಾತ್ರಿ ಹೊರಹಾಕಿದ್ದ. ನಂತರ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕಟಕೋಳ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 8ನೇ ಹೆಚ್ಚುವರಿ ಮತ್ತು ಸತ್ರ ಜಿಲ್ಲಾ ನ್ಯಾಯಾಧೀಶ ವಿ.ಬಿ. ಸೂರ್ಯವಂಶಿ ಆತನನ್ನು ಅಪರಾಧಿ ಎಂದು ತೀರ್ಮಾನಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ 8ನೇ ಸರ್ಕಾರಿ ಅಭಿಯೋಜಕ ಕಿರಣ ಎಸ್. ಪಾಟೀಲ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.