ADVERTISEMENT

ಜಿಂಕೆ ಬೇಟೆಗೆ ಯತ್ನ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 10:10 IST
Last Updated 28 ಡಿಸೆಂಬರ್ 2020, 10:10 IST

ಚನ್ನಮ್ಮನ ಕಿತ್ತೂರು (ಬೆಳಗಾವಿ): ತಾಲ್ಲೂಕಿನ ಕುಲವಳ್ಳಿ ಬಳಿಯ ಅರಣ್ಯ ಪ್ರದೇಶ ಪ್ರವೇಶಿಸಿ ಗುಂಡು ಹಾರಿಸಿ ಜಿಂಕೆ ಬೇಟೆಯಾಡಲು ಭಾನುವಾರ ಯತ್ನಿಸಿದ ನಾಲ್ವರಲ್ಲಿ ಇಬ್ಬರನ್ನು ಕಿತ್ತೂರು ಉಪವಲಯ ಅರಣ್ಯ ಅಧಿಕಾರಿ ತಂಡ ಬಂಧಿಸಿದೆ.

ಬೆಳಗಾವಿಯ ವಿನಾಯಕ ನಗರದ ಉದ್ದವ ರಾಜೇಂದ್ರ ನಾಯಕ (30), ಕಾಕತಿ ಗ್ರಾಮದ ದೇಸಾಯಿ ಗಲ್ಲಿಯ ಸಾಗರ ಯಲ್ಲೋಜಿ ಪಿಂಗಟೆ (31) ಬಂಧಿತ ಆರೋಪಿಗಳು.

‘ಇನ್ನಿಬ್ಬರು ಆರೋ‍ಪಿಗಳಾದ ಕಿತ್ತೂರಿನ ಅತಾವುಲ್ಲ ಶೀಗಿಹಳ್ಳಿ ಹಾಗೂ ಬೆಳಗಾವಿ ನೆಹರೂ ನಗರದ ಮಹಮ್ಮದ ಅಲಿ ಖಾನ್ ಪರಾರಿಯಾಗಿದ್ದಾರೆ. ಬಂಧಿತರಿಂದ ಬಂದೂಕು, 28 ಜೀವಂತ ಗುಂಡುಗಳು, ಹೆಡ್ ಟಾರ್ಚ್ 2, ಚಾಕು, ವಾಕಿಟಾಕಿ, ನಾಲ್ಕು ಬಾಕ್ಸ್ ಸ್ಯಾಂಪಲ್ ಏರಗನ್ ಗುಂಡುಗಳು ಹಾಗೂ ಮಾರುತಿ ಸ್ವಿಫ್ಟ್ ಡಿಸೈರ್ ಕಾರ್ ವಶಪಡಿಸಿಕೊಳ್ಳಲಾಗಿದೆ’ ಎಂದು ಉಪವಲಯ ಅರಣ್ಯಾಧಿಕಾರಿ ಸಂಜಯ ಮಗದುಮ್ ತಿಳಿಸಿದ್ದಾರೆ.

ADVERTISEMENT

ಬೆಳಗಾವಿ ವೃತ್ತದ ಸಿಸಿಎಫ್ ಬಿ.ವಿ. ಪಾಟೀಲ, ಡಿಸಿಎಫ್ ಎಂ.ವಿ. ಅಮರನಾಥ, ಎಸಿಪಿ ಸಿ.ಬಿ. ಮಿರ್ಜಿ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯ ಅಧಿಕಾರಿ ಸಂಜಯ ಮಗದುಮ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ರಕ್ಷಕರಾದ ಅಜೀಜ್ ಮುಲ್ಲಾ, ಪ್ರವೀಣ ದೂಳಪ್ಪಗೋಳ, ಗಿರೀಶ ಮೆಕ್ಕೇದ, ರಾಜು ಹುಬ್ಬಳ್ಳಿ, ಮಹಮ್ಮದ ರಫೀಕ್ ತಹಶೀಲ್ದಾರ್, ಕಾವಲುಗಾರರಾದ ಪ್ರಕಾಶ ಕಿರಬನವರ, ನವೀನ ಹಂಚಿನಮನಿ, ಪ್ರಕಾಶ ಕೆಳಗಡೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.