ADVERTISEMENT

ಬೆಳಗಾವಿ: ಬೆಲೆ ಕುಸಿತದಿಂದ ಎಕರೆ ಎಲೆಕೋಸು ಮಣ್ಣು ಪಾಲು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 14:18 IST
Last Updated 1 ಏಪ್ರಿಲ್ 2020, 14:18 IST
ಬೆಳಗಾವಿ ತಾಲ್ಲೂಕು ಕಡೋಲಿಯಲ್ಲಿ ರೈತರು ಎಲೆಕೋಸನ್ನು ನಾಶಪಡಿಸಿದರು
ಬೆಳಗಾವಿ ತಾಲ್ಲೂಕು ಕಡೋಲಿಯಲ್ಲಿ ರೈತರು ಎಲೆಕೋಸನ್ನು ನಾಶಪಡಿಸಿದರು   

ಬೆಳಗಾವಿ: ಲಾಕ್‌ಡೌನ್‌ನಿಂದಾಗಿ ಬೆಲೆ ಕುಸಿತ ಉಂಟಾಗಿರುವುದರಿಂದ ನೊಂದ ತಾಲ್ಲೂಕಿನ ಕಡೋಲಿಯ ರೈತ ರಮೇಶ ಮಾಯಣ್ಣ ಅವರು ಎಕರೆಯಲ್ಲಿ ಬೆಳೆದಿದ್ದ ಎಲೆಕೋಸನ್ನು ಜಮೀನಿನಲ್ಲೇ ಬುಧವಾರ ಟ್ರ್ಯಾಕ್ಟರ್‌ನ ಕಲ್ಟಿವೇಟರ್‌ನಿಂದ ಉಳುಮೆ ಮಾಡಿ ನಾಶಪಡಿಸಿದರು.

‘ಎಪಿಎಂಸಿ ಮಾರುಟಕ್ಟೆಯಲ್ಲಿ ಕೆ.ಜಿ.ಗೆ ಸರಾಸರಿ ಕೇವಲ ₹ 1ರಿಂದ ₹ 1.50 ಬೆಲೆಯಷ್ಟೇ ಸಿಗುತ್ತಿದೆ. ಕೆ.ಜಿ.ಗೆ ₹ 5 ಸಿಕ್ಕಿದ್ದರೂ ಮಾರಬಹುದಿತ್ತು. 50 ಕೆ.ಜಿ.ಯ ಚೀಲವನ್ನು ದಲ್ಲಾಳಿಗಳು ₹ 60ಕ್ಕೆ ಕೇಳುತ್ತಿದ್ದಾರೆ. ಇದರಿಂದ ಬೇಸಾಯ, ಕಟಾವು ಸಾಗಣೆ ಮಾಡಿದ ವೆಚ್ಚವೂ ಸಿಗುತ್ತಿಲ್ಲ. ಬಹಳ ನಷ್ಟ ಆಗುತ್ತಿರುವುದರಿಂದ ನಾಶಪಡಿಸಿದ್ದೇನೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕಡೋಲಿ ಸುತ್ತಮುತ್ತಲಿನ ಗ್ರಾಮಗಳ ಹಲವು ರೈತರು ಕೂಡ ಇದೇ ರೀತಿ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.