ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 14:18 IST
Last Updated 3 ಜೂನ್ 2019, 14:18 IST
ಅಥಣಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಬಿಇಒ ಕಚೇರಿ ವ್ಯವಸ್ಥಾಪಕ ವಿ.ಜೆ. ಸ್ವಾಮಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಅಥಣಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಬಿಇಒ ಕಚೇರಿ ವ್ಯವಸ್ಥಾಪಕ ವಿ.ಜೆ. ಸ್ವಾಮಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ಅಥಣಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ತರಗತಿಯ ಸಾಮಾನ್ಯ ಶಿಕ್ಷಕರೆಂದು ಮಾತ್ರ ಪರಿಗಣಿಸಿರುವುದನ್ನು ಖಂಡಿಸಿ ಶಿಕ್ಷಕರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಂ. ಹಿರೇಮಠ ಮಾತನಾಡಿ, ‘ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಶೇ 60ರಷ್ಟು ಶಿಕ್ಷಕರು ಮಂದಿ ಬಿಎ, ಎಂ.ಎ, ಎಂ.ಫಿಲ್, ಪಿಎಚ್‌.ಡಿ, ಎಂ.ಇಡಿ, ಎಂಎಸ್ಸಿ ಪದವಿ ಪಡೆದವರು ಇದ್ದಾರೆ. ಸಾಕಷ್ಟು ಅನುಭವವೂ ಇದೆ. ಆದರೆ, ಅದನ್ನು ಪರಿಗಣಿಸದೇ ಅವರನ್ನು ಪ್ರಾಥಮಿಕ ಶಾಲೆ ಮಟ್ಟಕ್ಕೆ ಮಾತ್ರವೇ ಸೀಮಿತಗೊಳಿಸುತ್ತಿರುವುದು ಖಂಡನೀಯ’ ಎಂದರು.

‘ಇಲಾಖೆಯಲ್ಲಿರುವ ಲಕ್ಷಕ್ಕೂ ಹೆಚ್ಚಿನ ಶಿಕ್ಷಕರಿಗೆ ಅನ್ಯಾಯ ಮಾಡಿ, ಹೊಸ ನೇಮಕಾತಿಗೆ ಮುಂದಾಗಿರುವುದು ಸರಿಯಲ್ಲ. ಪದವೀಧರ ಶಿಕ್ಷಕರನ್ನು ಮೊದಲು ಪರಿಗಣಿಸಿ, ಕೊರತೆಯಾಗುವ ಹುದ್ದೆಗಳಿಗೆ ಮಾತ್ರವೇ ಭರ್ತಿ ಮಾಡಬೇಕಾಗಿತ್ತು’ ಎಂದು ತಿಳಿಸಿದರು.

ADVERTISEMENT

‘40ಸಾವಿರ ಶಾಲೆಗಳಲ್ಲಿ 6–8ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸುವ ಕೆಲಸವನ್ನೂ ಪದವೀಧರ ಶಿಕ್ಷಕರಾದ ನಾವು ಮಾಡುತ್ತಿದ್ದೇವೆ. ಸರ್ಕಾರದ ಆದೇಶದ ಪ್ರಕಾರ ನಾವು 1ರಿಂದ 5ನೇ ತರಗತಿಯವರಿಗೆ ಮಾತ್ರವೇ ಕಲಿಸಬೇಕಾಗುತ್ತದೆ. ನಮ್ಮನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಲೀನಗೊಳಿಸಿ, ಪದವೀಧರ ಶಿಕ್ಷಕರೆಂದು ಪರಿಗಣಿಸಿದರೆ ಮಾತ್ರ 6ರಿಂದ 8ನೇ ತರಗತಿ ಮಕ್ಕಳಿಗೆ ಕಲಿಸುತ್ತೇವೆ. ಇಲ್ಲವಾದಲ್ಲಿ ಆ ಮಕ್ಕಳಿಗೆ ಅಧಿಕಾರಿಗಳಿಂದಲೇ ಅನ್ಯಾಯವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಉಪಾಧ್ಯಕ್ಷ ಎ.ಬಿ. ಕುಟಕೋಳಿ ಮಾತನಾಡಿದರು. ಬಳಿಕ ಬಿಇಒ ಕಚೇರಿ ವ್ಯವಸ್ಥಾಪಕ ವಿ.ಜೆ. ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಉಪಾಧ್ಯಕ್ಷೆ ಅರ್ಚನಾ ಪಾಟೀಲ, ಶಿಕ್ಷಕರಾದ ಪಿ.ಎಚ್. ಪತ್ತಾರ, ವಿ.ಎ. ಕನ್ನೂರ, ಶಿವಾನಂದ ಮೇಲ್ಗಡೆ, ಎಂ.ಪಿ. ಬಿಜ್ಜರಗಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.