ADVERTISEMENT

ಸೌಹಾರ್ದತೆ, ಭಾವೈಕ್ಯತೆ ಸಂಕೇತ ಉರುಸ್: ಪೃಥ್ವಿ ಕತ್ತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 2:41 IST
Last Updated 10 ಫೆಬ್ರುವರಿ 2026, 2:41 IST
ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದಲ್ಲಿ ಜರುಗಿದ ಪೀರಾನೆಪೀರ್ ಮೆಹಬೂಬ್ ಸು ಬಹಾನಿ ರಹ್ಮತುಲ್ಲಾ ಅಲ್ಯೆಯವರ ಸಂದಲ್ ಹಾಗೂ ಉರುಸ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡ ಜೋಡು ಕುದುರೆ ಸ್ಪರ್ಧೆಗೆ ಹು.ಗ್ರಾ.ವಿ.ಸ.ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹಸಿರು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು.
ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದಲ್ಲಿ ಜರುಗಿದ ಪೀರಾನೆಪೀರ್ ಮೆಹಬೂಬ್ ಸು ಬಹಾನಿ ರಹ್ಮತುಲ್ಲಾ ಅಲ್ಯೆಯವರ ಸಂದಲ್ ಹಾಗೂ ಉರುಸ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡ ಜೋಡು ಕುದುರೆ ಸ್ಪರ್ಧೆಗೆ ಹು.ಗ್ರಾ.ವಿ.ಸ.ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹಸಿರು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು.   

ಘೋಡಗೇರಿ (ಹುಕ್ಕೇರಿ): ಹಬ್ಬ ಹರಿದಿನ, ಜಾತ್ರೆ ಮತ್ತು ಉರುಸುಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪರಸ್ಪರರಲ್ಲಿ ಸೌಹಾರ್ದತೆ, ಭಾವೈಕ್ಯತೆ ಬೆಸೆಯುತ್ತದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ಅವರು ಭಾನುವಾರ ತಾಲ್ಲೂಕಿನ ಘೋಡಗೇರಿ ಗ್ರಾಮದಲ್ಲಿ ಪೀರಾನೆಪೀರ್ ಮೆಹಬೂಬ್ ಸು ಬಹಾನಿ ರಹ್ಮತುಲ್ಲಾ ಅಲ್ಯೆಯವರ ಸಂದಲ್ ಹಾಗೂ ಉರುಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಾಲ್ಲೂಕಿನ ಜನರು ಜಾತಿ ಧರ್ಮ ಭೇದಭಾವ ಮಾಡದೆ ಪರಸ್ಪರರು ಸಹೋದರರಂತೆ ಭಾವೈಕ್ಯತೆಯಿಂದ ಬದುಕುತ್ತಿದ್ದಾರೆ ಎಂದರು.

ಹುಕ್ಕೇರಿ ಬಿಜೆಪಿ ಮಂಡಲ ಅಧ್ಯಕ್ಷ ಮತ್ತು ಗ್ರಾಮಸ್ಥ ರಾಚಯ್ಯ ಹಿರೇಮಠ ಮಾತನಾಡಿ,  ಘೋಡಗೇರಿ ಗ್ರಾಮ ಭಾವೈಕ್ಯತೆ ಸಂಕೇತವಾಗಿದೆ ಎಂದರು.

ADVERTISEMENT

 ಪೃಥ್ವಿ ಕತ್ತಿ ಅವರು ಜೋಡು ಕುದುರೆ ಗಾಡಿ ಸ್ಪರ್ಧೆಗೆ ಹಸಿರು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು.
ಈ ವೇಳೆ ಮುಖಂಡರಾದ ಹೆಚ್. ವೈ ಪಾಟೀಲ, ಅರ್ಜುನ ನಾಯಕ ಪಾಟೀಲ, ಸಿದ್ರಾಮ ಮುಗಳಿ, ವಿಶಾಲ ಪೂಜೇರಿ, ಶ್ರೀಕಾಂತ ಭೂಶಿ, ಬಾಬು ಅಂಕಲಗಿ, ಗುರುನಾಥ ಕಡೇಲಿ, ಚನ್ನಪ್ಪ ಸೊಂಟನ್ನವರ, ಬಾಬಾಸಾಬ ಮೊಕಾಶಿ, ಇಬ್ರಾಹಿಂ ಮೊಕಾಶಿ, ಜಿಯಾವುಲ್ಲಾ ವಂಟಮೂರಿ, ಬಸವರಾಜ ಪ್ಯಾಟಿ, ಶ್ರೀಕಾಂತ ರುದ್ರಪ್ಪಗೋಳ, ಶ್ರೀಶೈಲ ವರ್ಜಿ, ಗೋಪಾಲ ಮಗದುಮ್ಮ, ಅಪ್ಪುನಾಯಕ ಪಾಟೀಲ, ಗೀತಾ ಮಗದುಮ್ಮ, ವೀರ ಮೆಹಬೂಬ ಸು ಬಹಾನಿ ಉರುಸ ಕಮೀಟಿ ಸದಸ್ಯರು ಮತ್ತು ಅಹಲೇ ಸುನ್ನತ ಮುಸ್ಲಿಂ ಜಮಾತ್ತಿನ ಅಧ್ಯಕ್ಷ ಅಬ್ದುಲ್ ರಹೀಮ ಅತ್ತಾರ, ಉಪಾಧ್ಯಕ್ಷ ಸೈಯದ್ ಮೊಕಾಶಿ, ಕಾರ್ಯದರ್ಶಿ ಗುಲಾಬ ಬಾಗವಾನ, ಮಲ್ಲಿಕಜಾನ ಮೊಕಾಶಿ, ಗುಡುಸಾಬ ಮುನ್ನೋಳ್ಳಿ, ಇಸ್ಮಾಯಿಲ್ ಮುಲ್ಲಾ, ಮಹ್ಮದ ಬೇಪಾರಿ, ಹಸನ ಬೇಪಾರಿ, ಸೈಯದ ವಂಟಮೂರಿ, ಮೆಹಬೂಬ ನಧಾಪ, ಬಾಬು ಮದಿಹಳ್ಳಿ, ಅಸ್ಲಂ ಜಿಂದಾಶಾ ಮಕಾನದಾರ, ಮೆಹಬೂಬ ಸುಬಹಾನಿ ಮಕಾನದಾರ ಸೇರಿದಂತೆ ಗ್ರಾಮಸ್ಥರು ಇದ್ದರು.

 ಫೆ.7 ರಂದು ಬೆಳಗಾವಿ ಬಾಷಿಬಾನ ಕಿಬಲಾದ ಹಜರತ್ ಸಯ್ಯದ ನಿಜಾಮುದ್ದಿನ ಬುಖಾರಿಸಾಬ ಹಾಗೂ ಕುಡಚಿಯ ಹಜರತ್ ಅಹ್ಮೇದ ಇರ್ಪಾನ ಜುನೇದಿ ಅವರ ಸಮ್ಮುಖದಲ್ಲಿ ಎ.ವೈ. ಪಾಟೀಲ ಅವರ ಮನೆಯಿಂದ ವಾದ್ಯಮೇಳದೊಂದಿಗೆ ಪೀರ ಮೆಹಬೂಬ ಸಬಹಾನಿ ರಹ್ಮತುಲ್ಲಾ ಅಲೈ ದೇವರಿಗೆ ಗಂಧ ಅರ್ಪಣೆ ಮಾಡಲಾಯಿತು.

 ಫೆ.8 ರಂದು ರಾತ್ರಿ ಹಿಂದೂ ಮುಸ್ಲಿಂ ಸಮಾಜದ ವತಿಯಿಂದ ಪೀರಾನೆ ಪೀರ ಮೆಹಬೂಬ ಸುಬಹಾನಿ ರಹ್ಮತುಲ್ಲಾ ಗದ್ದುಗೆಗೆ ಗಲೀಪ ಅರ್ಪಣೆ ಮಾಡಲಾಯಿತು. ಅಂದು ರಾತ್ರಿ 10 ಗಂಟೆಗೆ ಬೆಂಗಳೂರು ಇಂಟರನ್ಯಾಷನಲ್ ಕವಾಲಿ ಜ ತೌಶೀಪ್ ಖಾದ್ರಿ ಮತ್ತು ಕೊಲ್ಹಾಪುರದ ಇಂಟರನ್ಯಾಷನಲ್ ಕವಾಲಿ ಇಂತೇಜಾರ ಚಿಸ್ತಿ ಅವರಿಂದ ಕವಾಲಿಕಾ ಶಾಂದಾರ ಮುಕ್ಕಾಬುಲ್ಲಾ ನಡೆಯಿತು.

ಈ ಎರಡು ದಿನಗಳ ಕಾಲ ನಡೆದ ಉರುಸು ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಸಮಾಜದ ಗುರು ಹಿರಿಯರು ಪೀರ ಮೆಹಬೂಬ ಸುಬಹಾನಿ ಉರುಸ ಕಮಿಟಿಯವರು ಅಹಲೇ ಸುನ್ನತ ಮುಸ್ಲಿಂ ಜಮಾತಿನವರು ಪೀರ ಮೆಹಬೂಬ ಸುಬಹಾನಿ ಯುವಕ ಮಂಡಳ ಘೋಡಗೇರಿ ಶಹೀದ ಕರ್ಬಲಾ ಟೀಮ ಸದಸ್ಯರು ಪಾಲ್ಗೊಂಡಿದ್ದರು.

ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದಲ್ಲಿ ಜರುಗಿದ ಪೀರಾನೆಪೀರ್ ಮೆಹಬೂಬ್ ಸು ಬಹಾನಿ ರಹ್ಮತುಲ್ಲಾ ಅಲ್ಯೆಯವರ ಸಂದಲ್ ಹಾಗೂ ಉರುಸ ಕಾರ್ಯಕ್ರಮ ಅಂಗವಾಗಿ ಗದ್ದುಗೆಗೆ ಹು.ಗ್ರಾ.ವಿ.ಸ.ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಗಲೀಪ ಅರ್ಪಣೆ ಮಾಡಿ ನಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.