
ಯಮಕನಮರಡಿ: ಭೂಮಿ ಕಳೆದುಕೊಂಡ ಸಂತ್ರಸ್ತರಿಂದ ಮಾರ್ಚ್ 11ರಂದು ಮುಖ್ಯ ಅಭಿಯಂತರರು ಕರ್ನಾಟಕ ನೀರಾವರಿ ನಿಗಮ ಉತ್ತರ ವಲಯ ಬೆಳಗಾವಿ ಇವರ ಕಚೇರಿ ಎದುರು ಅನಿರ್ದಿಷ್ಟಾವಧಿ ಜನ ಜಾನವಾರು ಹಾಗೂ ಮಕ್ಕಳೊಂದಿಗೆ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಮಾಸ್ತಿಹೊಳಿ ಗ್ರಾಮದ ರೈತ ಮುಖಂಡ ಬಾಳೇಶ ಮಾವನೂರಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಅವರು, ಹುಕ್ಕೇರಿ ತಾಲ್ಲೂಕಿನ ಮಾಸ್ತಿಹೋಳ ಗ್ರಾಮದ ಸುಮಾರು 394 ಎಕರೆ 26 ಗುಂಟೆ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಂಡು ಪರಿಹಾರ ಕೊಟ್ಟಿಲ್ಲ. ಆದ್ದರಿಂದ ಪರಿಹಾರ ನೀಡಲು ಒತ್ತಾಯಿಸಲಾಗುವುದು ಎಂದರು.
ಸಾಕಷ್ಟು ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಂದಾಯ ಅಧಿಕಾರಿಗಳು ನೀರಾವರಿ ಅಧಿಕಾರಿಗಳ ಸಹಯೋಗದೊಂದಿಗೆ ಚರ್ಚಿಸಲಾಗಿದೆ. ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ರೈತರಾದ ಸಂತೋಷ ಪಾಟೀಲ, ನಿಂಗಪ್ಪಾ, ಮಲ್ಲಪ್ಪಾ ಮಾವನೂರಿ, ನಿಂಗಪ್ಪಾ ಬಾಳಪ್ಪಾ ಗೋಣಿ, ಭರಮಾ ಬಾಳಪ್ಪಾ ಕಮತಿ, ಸಂಜು ಸುತಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.