ADVERTISEMENT

ಪಿಎಸ್‌ಐ ಆಗೋಕೆ ಹೈಟ್ ಬರಲಿಲ್ಲ ಅಂತಾ ಈ ಜೋಡಿಗಳು ಮಾಡಿದ ಐಡಿಯಾ ಏನು ಗೊತ್ತಾ?

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 15:08 IST
Last Updated 12 ಆಗಸ್ಟ್ 2021, 15:08 IST
ಬಾಳೇಶ ದುರದುಂಡಿ ಹಾಗೂ ಉಮೇಶ ಎನ್
ಬಾಳೇಶ ದುರದುಂಡಿ ಹಾಗೂ ಉಮೇಶ ಎನ್   

ಬೆಳಗಾವಿ: ನಾಗರಿಕ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗೆ ಇಲ್ಲಿ ಗುರುವಾರ ನಡೆದ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ ವೇಳೆ ವಿಗ್ ಹಾಕಿಕೊಂಡು ‘ಹೆಚ್ಚಿನ ಎತ್ತರ’ ತೋರಿಸಲು ಮುಂದಾಗಿ ‘ನೇಮಕಾತಿ ಪ್ರಾಧಿಕಾರಕ್ಕೆ ಮೋಸ ಮಾಡಲು ಪ್ರಯತ್ನಿಸಿದ’ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

ಚಿಕ್ಕೋಡಿ ತಾಲ್ಲೂಕಿನ ಜಾಗನೂರದ ಬಾಳೇಶ ದುರದುಂಡಿ ಹಾಗೂ ಮೂಡಲಗಿ ತಾಲ್ಲೂಕು ಕುಲಗೋಡದ ಉಮೇಶ ಎನ್ಆರೋಪಿಗಳು.

ತಾಲ್ಲೂಕಿನ ಮಚ್ಚೆಯ ಕೆಎಸ್‌ಆರ್‌ಪಿ 2ನೇ ಪಡೆಯಲ್ಲಿ ನಡೆದ ಪರೀಕ್ಷೆ ವೇಳೆ ಬಾಳೇಶ, ವಿಗ್ ಹಾಕಿಕೊಂಡು ಅದರೊಳಗೆ ಥರ್ಮಾಕೋಲ್‌ನ 3 ತುಣುಕುಗಳನ್ನು ಹಾಕಿಕೊಂಡು ಎತ್ತರ ತೋರಿಸಲು ಯತ್ನಿಸಿದ್ದು ಗೊತ್ತಾಗಿದೆ. ಅವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮತ್ತೊಬ್ಬ ಆರೋಪಿ ಉಮೇಶ ನಗರದ ಡಿ.ಎ.ಆರ್. ಮೈದಾನದಲ್ಲಿ ನಡೆದ ಪರೀಕ್ಷೆ ಕಾಲಕ್ಕೆ ವಿಗ್ ಹಾಗೂಥರ್ಮಾಕೋಲ್‌ಬಳಸಿಸಿಕ್ಕಿಬಿದ್ದಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.