ADVERTISEMENT

ಬೈಲಹೊಂಗಲ | ರೈತರ ಪಂಪ್‌ಸೆಟ್ ಕಳವು: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:29 IST
Last Updated 19 ಜುಲೈ 2024, 15:29 IST
ಬೈಲಹೊಂಗಲ ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಕಳ್ಳತನವಾಗಿದ್ದ ರೈತರ ಪಂಪ್‌ಸೆಟ್‍ಗಳನ್ನು ಹಾಗೂ ಅಪರಾಧಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿರುವುದು
ಬೈಲಹೊಂಗಲ ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಕಳ್ಳತನವಾಗಿದ್ದ ರೈತರ ಪಂಪ್‌ಸೆಟ್‍ಗಳನ್ನು ಹಾಗೂ ಅಪರಾಧಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿರುವುದು   

ಬೈಲಹೊಂಗಲ: ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ದಡದಲ್ಲಿರುವ ರೈತರ ಜಮೀನಿನ 10 ಪಂಪ್‌ಸೆಟ್ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡದ ಮಾಳಾಪೂರ ಖಾದ್ರಿ ಗಲ್ಲಿ ನಿವಾಸಿಗಳಾದ ಮೊಹಮ್ಮದನದೀಮ ಮಹಮ್ಮದಹನೀಫ ಹೆಬ್ಬಳ್ಳಿ (33), ರಿಯಾಜ ರಫೀಕ ಕಾರಿಗಾರ (28), ಸಮೀರ ನಜೀರ ಹೆಬ್ಬಳ್ಳಿ (21), ಜಾಕೀರಹುಸೇನ ನೂರಹ್ಮದ ಮಾಲದಾರ (25) ಬಂಧಿತರು.

ಬಂಧಿತರಿಂದ ₹2 ಲಕ್ಷ ಮೌಲ್ಯದ 10 ಪಂಪ್‌ಸೆಟ್‍ಗಳನ್ನು ಹಾಗೂ ಅಪಾರಧಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ ಟಾಟಾ ಎಸ್ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಬೆಳಗಾವಿ ಎಸ್‍ಪಿ ಭೀಮಾಶಂಕರ ಗುಳೇದ, ಕೆಎಸ್‍ಪಿಎಸ್ ಶೃತಿ ಕೆ., ಹೆಚ್ಚುವರಿ ಎಸ್‍ಪಿ ಆರ್.ಬಿ.ಬಸರಗಿ, ಡಿವೈಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಐ ಪಿ.ವಿ. ಸಾಲಿಮಠ, ಪಿಎಸ್‍ಐಗಳಾದ ಗುರುರಾಜ ಕಲಬುರ್ಗಿ, ಎಫ್.ವೈ. ಮಲ್ಲೂರ ನೇತೃತ್ವದಲ್ಲಿ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.