ADVERTISEMENT

ಬೈಲಹೊಂಗಲ: ವರ್ಷ ಧಾರೆಗೆ ನೆಲಕ್ಕುರುಳಿದ ಮರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 14:26 IST
Last Updated 11 ಏಪ್ರಿಲ್ 2024, 14:26 IST
ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಗುರುವಾರ ಸುರಿದ ಗಾಳಿ, ಮಳೆಗೆ ಮುಖ್ಯರಸ್ತೆಯಲ್ಲಿ ಮರ ನೆಲಕ್ಕುರುಳಿ ಸಂಚಾರಕ್ಕೆ ಅಡಚಣೆ ಆಯಿತು
ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಗುರುವಾರ ಸುರಿದ ಗಾಳಿ, ಮಳೆಗೆ ಮುಖ್ಯರಸ್ತೆಯಲ್ಲಿ ಮರ ನೆಲಕ್ಕುರುಳಿ ಸಂಚಾರಕ್ಕೆ ಅಡಚಣೆ ಆಯಿತು   

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲಿನ‌ ಕೆಲ‌ ಗ್ರಾಮಗಳಲ್ಲಿ ಗುಡುಗು, ಜೋರಾದ ಗಾಳಿಯೊಂದಿಗೆ ಗುರುವಾರ ಮಳೆ ಸುರಿಯಿತು.

ಕಾಯ್ದ ಭೂ ತಾಯಿ ಒಡಲಿಗೆ ಏಕಾಏಕಿ ಧರೆಗಿಳಿದ ಮಳೆರಾಯ ತುಸು ತಂಪೆರೆದ. ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನತೆ ಮಳೆಯ ಹನಿ ನೀರು ನೆತ್ತಿಯ ಮೇಲೆ ಬಿಳುತ್ತಿದ್ದಂತೆ ವರ್ಷಧಾರೆಗೆ ಮೈಯೊಡ್ಡಿ ಸಂಭ್ರಮಿಸಿದರು.

ಪಟ್ಟಣ ಪ್ರದೇಶದಲ್ಲಿ ತುಂತುರು ಮಳೆ ಹನಿ ಸುರಿದರೆ ಮತಕ್ಷೇತ್ರದ ಇಂಚಲ, ಹಾರೂಗೊಪ್ಪ, ಮರಕುಂಬಿ, ಮುರಗೋಡ, ಸುತ್ತಗಟ್ಟಿ ಗ್ರಾಮದಲ್ಲಿ ಜೋರಾದ ಮಳೆ ಸುರಿಯಿತು. ಮಳೆಯ ರಭಸಕ್ಕೆ ಬೀದಿಗಳು ಮಳೆ ನೀರಿನಿಂದ ತುಂಬಿ ಹರಿದವು. ಚರಂಡಿಗಳು ಉಕ್ಕಿ ತ್ಯಾಜ್ಯ ನೀರು ಹರಿದು ಹಳ್ಳ ಸೇರಿತು.

ADVERTISEMENT
ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಗುರುವಾರ ಸುರಿದ ಜೋರಾದ ಗಾಳಿ ಮಳೆಗೆ ಮುಖ್ಯರಸ್ತೆಯಲ್ಲಿ ಮರ ನೆಲಕ್ಕುರುಳಿ ಸಂಚಾರಕ್ಕೆ ಅಡಚಣೆ ಆಯಿತು.

ಹಾರೂಗೊಪ್ಪ ಗ್ರಾಮದಲ್ಲಿ ಜೋರಾದ ಗಾಳಿ ಮಳೆಗೆ ಬೈಲಹೊಂಗಲ– ಹಾರೂಗೊಪ್ಪ ಮುಖ್ಯ ರಸ್ತೆಯಲ್ಲಿ ಮರ ನೆಲಕ್ಕುರುಳಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಸ್ತೆ ಪಕ್ಕದ ಜಮೀನಿನ‌ ರೈತರು ಸ್ಥಳಕ್ಕೆ ಬಂದು ಮರ ತೆರುವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಮರಕುಂಬಿ, ಮಲ್ಲೂರ, ದುಂಡನಕೊಪ್ಪ ಗ್ರಾಮದಲ್ಲಿ ಮಳೆಗೆ ಕೆಲಕಾಲ ಹಳ್ಳಗಳು ತುಂಬಿ ಹರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.