ADVERTISEMENT

ಕಲೂತಿ ಶಾಲೆಯಲ್ಲಿ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 6:28 IST
Last Updated 17 ನವೆಂಬರ್ 2022, 6:28 IST
ಕಕಮರಿ ಗ್ರಾಮದ ಅಮ್ಮಾಜೇಶ್ವರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಹಕಾರಿ ಸಪ್ತಾಹ ಆಚರಿಸಲಾಯಿತು
ಕಕಮರಿ ಗ್ರಾಮದ ಅಮ್ಮಾಜೇಶ್ವರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಹಕಾರಿ ಸಪ್ತಾಹ ಆಚರಿಸಲಾಯಿತು   

ರಾಮದುರ್ಗ: ತಾಲ್ಲೂಕಿನ ಚಂದರಗಿಯ ಎಸ್.ಎಂ.ಕಲೂತಿ ಕ್ರೀಡಾ ವಸತಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು.

ಬಾಗಲಕೋಟೆ ಜಿಲ್ಲೆಯ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಮಕ್ಕಳಿಗೆ ವಿಜ್ಞಾನದ ಜೊತೆಗೆ ಸಾಮಾಜಿಕ ಕಳಕಳಿ ಇರುವ ಸಂಗತಿಗಳನ್ನು ತಿಳಿಸಬೇಕು ಎಂದರು.

ಸಂಸ್ಥೆಯ ಸಂಸ್ಥಾಪಕ ಎಸ್.ಎಂ.ಕಲೂತಿ, ನಿರ್ದೇಶಕರಾದ ಎಂ.ಎಸ್ ಮನೋಳಿ, ಎಸ್.ಆರ್.ನವರಕ್ಕಿ, ಉದಯಕುಮಾರ ಸೋಮನಟ್ಟಿ, ಎಸ್.ಎಸ್ ಮುದೇನೂರ, ಬಿ.ಎಂ.ಬೆಳಗಲಿ, ಪ್ರಾಚಾರ್ಯ ಎ.ಎನ್.ಮೋದಗಿ, ಪಿ.ಕೆ.ಪಾಟೀಲ, ವ್ಯವಸ್ಥಾಪಕ ಜಗದೀಶ ಮುರಗೋಡ ಮತ್ತು ಜೆ.ಬಿ.ಮೇಟಿ ಹಾಜರಿದ್ದರು.

ADVERTISEMENT

ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕನ್ನಡ, ಇಂಗ್ಲಿಷ್‌, ಹಿಂದಿ ಭಾಷಾ ವಿಭಾಗಗಳಲ್ಲಿ ಮಕ್ಕಳು ಹಲವಾರು ವೈವಿಧ್ಯಮಯ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು.

ದೇಶ–ವಿದೇಶದ ವಿವಿಧ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳನ್ನು ಸಂಗ್ರಹಿಸಿ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.