ADVERTISEMENT

ರಾಮದುರ್ಗ: ರಡ್ಡಿ ಸಮಾಜ ಸರ್ಕಾರಿ ಸೌಲಭ್ಯದಿಂದ ವಂಚಿತ- ಎಂ.ಸಿ. ಪ್ರಭಾಕರ ರಡ್ಡಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 2:08 IST
Last Updated 9 ಸೆಪ್ಟೆಂಬರ್ 2025, 2:08 IST
   

ರಾಮದುರ್ಗ: ರಾಜ್ಯ ಸರ್ಕಾರ ನಿಯೋಜಿಸಿಡಿದ್ದ ಕಾಂತರಾಜು ಆಯೋಗದ ವರದಿಯಿಂದ ರಡ್ಡಿ ಸಮಾಜದ ಜನಸಂಖ್ಯೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ. ಇದರಿಂದ ರಡ್ಡ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿ. ಪ್ರಭಾಕರ ರಡ್ಡಿ ಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕ ಹೊರತು ಪಡಿಸಿ ಉಳಿದೆಲ್ಲ ಕಡೆಗಳಲ್ಲಿ ರಡ್ಡಿ ಸಮಾಜ ಇದೆ. 35 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಸಮಾಜ ಕಾಂತರಾಜು ಆಯೋಗದ ವರದಿಯಿಂದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ ಎಂದು ದೂರಿದರು.

ರಡ್ಡಿ ಸಮಾಜದ ಶಕ್ತಿ ಕಡಿಮೆ ಎಂಬ ವರದಿಯಿಂದಾಗಿ ಶಿಕ್ಷಣ, ರಾಜಕೀಯ ಮತ್ತು ಸಾಮಾಜಿಕ ಹಿನ್ನೆಡೆ ಕಂಡಿರುವ ರಡ್ಡಿ ಸಮಾಜದವರು ಸರ್ಕಾರ ಸಮೀಕ್ಷೆಗೆ ಮರು ಆದೇಶ ಮಾಡಿದೆ. ರಡ್ಡಿ ಸಮಾಜದವರು ಜಾತಿ ಕಾಲಂನಲ್ಲಿ ‘1105 ರಡ್ಡಿ’ ಎಂದಷ್ಟೆ ಬರೆಯಿಸಬೇಕು. ಅಂದಾಗ ಮಾತ್ರ ರಡ್ಡಿ ಸಮಾಜದ ಅಂಕಿ ಸಂಖ್ಯೆಗಳು ಬಹಿರಂಗಗೊಳ್ಳಲು ಸಹಕರಿಸಬೇಕು ಎಂದು ಹೇಳಿದರು.

ADVERTISEMENT

ರಡ್ಡಿ ಸಮಾಜ 1925 ರಲ್ಲಿ ಸ್ಥಾಪನೆಯಾಗಿ ಈ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಸೆ.24ರಂದು ಬೆಂಗಳೂರಿನ ಗಾಯಿತ್ರಿ ವಿಹಾರದಲ್ಲಿ ಜರುಗುವ ಶತಮಾನೋತ್ಸವ ಸಮಾರಂಭದಲ್ಲಿ ರಡ್ಡಿ ಸಮಾಜದ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ರಾಮದುರ್ಗ ತಾಲ್ಲೂಕು ರಡ್ಡಿ ಸಮಾಜದ ಅಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ, ಕಲ್ಲಣ್ಣ ವಜ್ರಮಟ್ಟಿ, ರಾಜಶೇಖರ ತೋಳಗಟ್ಟಿ, ಕಾಂತರಾಜು ರಡ್ಡಿ, ಬಾನಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.