ADVERTISEMENT

ಸತತ 26 ದಿನ ದಿನಸಿ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 13:44 IST
Last Updated 25 ಜೂನ್ 2021, 13:44 IST
ಅಥಣಿ ತಾಲ್ಲೂಕಿನ ಸಂಕೋನಟ್ಟಿ ಗ್ರಾಮಸ್ಥರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದರು
ಅಥಣಿ ತಾಲ್ಲೂಕಿನ ಸಂಕೋನಟ್ಟಿ ಗ್ರಾಮಸ್ಥರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದರು   

ಅಥಣಿ (ಬೆಳಗಾವಿ ಜಿಲ್ಲೆ): ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ತಾಲ್ಲೂಕಿನ ಒಂದು ಲಕ್ಷ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು.

ತಮ್ಮ ಸತ್ಯ ಸಂಗಮ ಸೇವಾ ಟ್ರಸ್ಟ್‌ನಿಂದ ಈ ಸೇವಾ ಕಾರ್ಯ ನಡೆಸಿದರು.

ಸಂಕೋನಟ್ಟಿ ಗ್ರಾಮದಲ್ಲಿ ಕಿಟ್ ವಿತರಿಸುವ ಕೊನೆಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಸವದಿ, ‘ನನಗೆ ರಾಜಕೀಯ ನೆಲೆ ಕೊಟ್ಟು ರಾಜ್ಯದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ ಜನತೆಯ ಉಪಕಾರ ತೀರಿಸಲು ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ತಾಲ್ಲೂಕಿನಾದ್ಯಂತ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ’ ಎಂದರು.

ADVERTISEMENT

‘ಜಾತಿ, ಮತ ನೋಡದೆ ದಿನಸಿ ಕಿಟ್ ನೀಡಲಾಗಿದೆ. ಕಾರ್ಯಕರ್ತರು ಕೋವಿಡ್ ಭೀತಿಯಲ್ಲೂ ತಮ್ಮ ಕೆಲಸ ಬಿಟ್ಟು ಜನರಿಗೆ ಸಮರ್ಪಕವಾಗಿ ವಿತರಿಸಿದ್ದಾರೆ. ಅವರ ಸೇವೆಯೂ ಶ್ಲಾಘನೀಯ’ ಎಂದು ಹೇಳಿದರು.

ಮುಖಂಡರಾದ ಚಿದಾನಂದ ಸವದಿ, ಅಮರ ದುರ್ಗನ್ನವರ, ಸಂತೋಷ ಸಾವಡಕರ, ಶ್ರೀಶೈಲ ನಾಯಿಕ, ರಾಮನಗೌಡ ಪಾಟೀಲ, ಪ್ರದೀಪ ನಂದಗಾವ, ರಾಜು ಯಕ್ಕಂಚಿ, ಶಿವು ಆಸಂಗಿ, ಮಹಾಂತೇಶ ಠಕ್ಕನ್ನವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.