ADVERTISEMENT

ಪಡಿತರ ಅಕ್ಕಿ ಅಕ್ರಮ ಸಾಗಾಟ: 2.75 ಟನ್‌ ತೂಕದ ಪಡಿತರ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 2:56 IST
Last Updated 28 ಫೆಬ್ರುವರಿ 2026, 2:56 IST
White rice in burlap sack bag isolated on white background
White rice in burlap sack bag
White rice in burlap sack bag isolated on white background White rice in burlap sack bag   

ಅಂಕಲಗಿ (ಗೋಕಾಕ): ಕಾಳಸಂತೆಯಲ್ಲಿ ಮಾರಾಟ ಮಾಡಲು ಸುಮಾರು ₹ 62 ಸಾವಿರ ಮೌಲ್ಯದ 2.75 ಟನ್‌ ತೂಕದ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಸರಕು ಸಾಗಣೆ ವಾಹನವನ್ನು ತಪಾಸಣೆ ಒಳಪಡಿಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದು ಕಂಡು ಬಂದು ವಶಪಡಿಸಿಕೊಳ್ಳಲಾಗಿದೆ.

ಪಡಿತರ ಅಕ್ಕಿ ಅಕ್ರಮ ಸಾಗಣೆ ಕುರಿತು ಮಾಹಿತಿ ಲಭಿಸುತ್ತಲೇ ನೋಡಲ್‌ ಅಧಿಕಾರಿ ಗೀತಾ ರಡ್ಡೇರಟ್ಟಿ ತಪಾಸಣೆ ನಡೆಸುವ ವೇಳೆ ಆಪಾದಿತರಾದ ಹುಕ್ಕೇರಿ ತಾಲ್ಲೂಕಿನ ಸುಲ್ತಾನಪೂರದ ಸತ್ಯಗೊಂಡ ಬಸವಣ್ಣಿ ಮಗದುಮ್‌, ಅಂಕಲಗಿಯ ಆನಂದ ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಹುಕ್ಕೇರಿಯ ರವಿ ಗಜಬರ ಎಂಬುವವರು ಮಾಲು ಸಮೇತ ಸಿಕ್ಕಿಬಿದ್ದರು ಎನ್ನಲಾಗಿದೆ.

ಈ ಕುರಿತು ನೋಡಲ್‌ ಅಧಿಕಾರಿಗಳು ಅಂಕಲಗಿ ಪೊಲೀಸ್‌ ಠಾಣೆಗೆ ನೀಡಿದ ದೂರು ನೀಡಿದ್ದಾರೆ.

ADVERTISEMENT

ಸವಾರ ಸ್ಥಳದಲ್ಲೇ ಸಾವು

ಗೋಕಾಕ: ರಸ್ತೆ ಬದಿಯಲ್ಲಿ ನಿಂತಿದ್ದ ನೀರಿನ ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ, ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ತಾಲ್ಲೂಕಿನ ಕೊಳವಿ ಫ್ಯಾಕ್ಟರಿ ಬಳಿ ಕಳೆದ ಈಚೆಗೆ ರಾತ್ರಿ 8.30ರ ಸುಮಾರಿಗೆ ನಡೆದಿದೆ.

ಮೃತರನ್ನು ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯ ಪ್ರಕಾಶ ಶಂಕರೆಪ್ಪ ಬಡಿಗೇರ (51) ಎಂದು ಗುರ್ತಿಸಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಟ್ಯಾಂಕರರ್ ಚಾಲಕ ಬೆಣಚಿನಮರಡಿ ಗ್ರಾಮದ ರಾಮಚಂದ್ರ ದುರ್ಗಪ್ಪ ವಡ್ಡರ ಮತ್ತು ಮೃತ ದ್ವಿಚಕ್ರ ವಾಹನ ಸವಾರ ಪ್ರಕಾಶ ಶಂಕರೆಪ್ಪ ಬಡಿಗೇರ ಇಬ್ಬರ ವಿರುದ್ಧವೂ ನಿರ್ಲಕ್ಷ್ಯದಿಂದ ಅಪಘಾತದ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.