ADVERTISEMENT

ಆರ್‌ಸಿಯುಗೆ 126 ಎಕರೆ ಮಂಜೂರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 16:01 IST
Last Updated 21 ಸೆಪ್ಟೆಂಬರ್ 2020, 16:01 IST

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 126 ಎಕರೆ 27 ಗುಂಟೆ ಜಮೀನನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಾಗೂ ವಿಸ್ತರಣೆಗೆ ಉಂಟಾಗಿದ್ದ ಜಾಗದ ಕೊರತೆ ನಿವಾರಣೆಯಾದಂತಾಗಿದೆ.

‘ತಾಲ್ಲೂಕಿನ ಬಾಗೇವಾಡಿ (ಸಂಕನಾಯ್ಕನಕೊಪ್ಪ) ಗ್ರಾಮದ ರಿ.ಸ.ನಂ. 421/2, 423, 426, 427, 429 ಮತ್ತು 431ರಲ್ಲಿ 87 ಎಕರೆ 39 ಗುಂಟೆ ಹಾಗೂ ಹಾಲಗಿಮರ್ಡಿ ಗ್ರಾಮದ ರಿ.ಸ.ನಂ. 48, 48 ಹಾಗೂ 49ರ 38 ಎಕರೆ 28 ಗುಂಟೆ ಜಮೀನನ್ನು ಭೂಕಂದಾಯ ನಿಯಮಗಳ ಅನ್ವಯ ನೀಡಲಾಗಿದೆ. ಮಾರುಕಟ್ಟೆ ದರದ ಶೇ 50ರಷ್ಟು ದರ ಮತ್ತು ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ ವಿಶ್ವವಿದ್ಯಾಲಯದ ಕುಲಪತಿಗೆ ಮಂಜೂರು ಮಾಡಲಾಗಿದೆ’ ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಇ. ಚನ್ನಬಸವರಾಜ ಆದೇಶ ಹೊರಡಿಸಿದ್ದಾರೆ.

‘ಇವು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿರಿಸಿದ ಜಮೀನುಗಳಾಗಿವೆ. ವಿಶ್ವವಿದ್ಯಾಲಯಕ್ಕೆ ಸ್ವಂತ ಭೂಮಿ ಇಲ್ಲದೆ ಇರುವುದರಿಂದಾಗಿ ವೃತ್ತಿಪರ ಹಾಗೂ ಕೌಶಲವೃದ್ಧಿಸುವ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಯಾವುದೇ ಕಟ್ಟಡಗಳನ್ನು ಹೊಂದದೆ ಇರುವುದರಿಂದ ಜಮೀನಿನ ಅಗತ್ಯವಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.