ADVERTISEMENT

ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 13:54 IST
Last Updated 14 ಡಿಸೆಂಬರ್ 2018, 13:54 IST
ಅಲೆಮಾರಿ ಜನಾಂಗದ ಎಲ್ಲ ಉಪ ಪಂಗಡಗಳನ್ನು ಪ್ರವರ್ಗ 1ರಿಂದ ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅಲೆಮಾರಿ ಸಮುದಾಯದ ಹೋರಾಟಗಾರರು ಶುಕ್ರವಾರ ಬೆಳಗಾವಿಯಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು
ಅಲೆಮಾರಿ ಜನಾಂಗದ ಎಲ್ಲ ಉಪ ಪಂಗಡಗಳನ್ನು ಪ್ರವರ್ಗ 1ರಿಂದ ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅಲೆಮಾರಿ ಸಮುದಾಯದ ಹೋರಾಟಗಾರರು ಶುಕ್ರವಾರ ಬೆಳಗಾವಿಯಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು   

ಬೆಳಗಾವಿ: ಅಲೆಮಾರಿ ಜನಾಂಗದ ಎಲ್ಲ ಉಪ ಪಂಗಡಗಳನ್ನು ಪ್ರವರ್ಗ 1ರಿಂದ ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅಲೆಮಾರಿ ಸಮುದಾಯದ ಹೋರಾಟಗಾರರು ಶುಕ್ರವಾರ ನಗರದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.

‘ಪ್ರವರ್ಗ 1ರಲ್ಲಿ ಇರುವುದರಿಂದ ಬೈಲಪತರ, ಹೆಳವರ ಮೊದಲಾದ ಪಂಗಡದವರು ಸೌಲಭ್ಯಗಳಿಂದ ವಂಚಿತವಾಗುತ್ತಿದ್ದಾರೆ. ಊರೂರು ಸುತ್ತುತ್ತಾ ಉಂಗುರ, ಹಾಲಗಡಗ, ಕಬ್ಬಿಣ, ತಾಮ್ರ, ಹಿತ್ತಾಳೆಯಿಂದ ಚಿಕ್ಕಪುಟ್ಟ ವಸ್ತುಗಳನ್ನು ಸಿದ್ಧಪಡಿಸಿ ಮಾರುವವರಿಗೆ ಹೆಚ್ಚಿನ ಸೌಲಭ್ಯ ಒದಿಗಸುವ, ಸಮಾಜದ ಮುಖ್ಯವಾಹಿನಿಗೆ ತರುವ ಅಗತ್ಯವಿದೆ’ ಎಂದು ತಿಳಿಸಿದರು.

ಮುಖಂಡರಾದ ಹನಮಂತ ಟಿಕೋಳ, ಅಪ್ಪೂಶ ಸಂಪ್ಲಿಸಿ, ನಾಗೇಶ ಪಂಚಮಿ, ಪ್ರಹ್ಲಾದ ಸಂಪ್ಲಿಸಿ, ಶಂಕರ ಪಂಚಮಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.