ADVERTISEMENT

ವಿವಿಧ ಕಾಮಗಾರಿಗಳಿಗೆ ₹ 7.27 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:08 IST
Last Updated 15 ಜನವರಿ 2026, 4:08 IST
ಪ್ರಕಾಶ ಹುಕ್ಕೇರಿ
ಪ್ರಕಾಶ ಹುಕ್ಕೇರಿ   

ಚಿಕ್ಕೋಡಿ: ತಾಲ್ಲೂಕಿನ ಸದಲಗಾ ಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹ 7.27 ಕೋಟಿ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬರಲಾಗಿದೆ. ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಅನುದಾನ ಮಂಜೂರಾಗಿದೆ.

ಸದಲಗಾ ಪುರಸಭೆ ವ್ಯಾಪ್ತಿಯಲ್ಲಿನ ಸದಲಗಾ-ದತ್ತವಾಡ ರಸ್ತೆ ಸುಧಾರಣೆ ಕಾಮಗಾರಿಗೆ ₹ 3.95 ಕೋಟಿ, ಸದಲಗಾ-ಘೋಸರವಾಡ ಬ್ಯಾರೇಜ್ ವರೆಗಿನ ರಸ್ತೆ ಸುಧಾರಣೆಗೆ ₹ 1 ಕೋಟಿ, ಸದಲಗಾ ಪಟ್ಟಣದ ಅಂಬೇಡ್ಕರ್‌  ನಗರದಿಂದ ಮಲಿಕವಾಡ ಕೂಡು ರಸ್ತೆ ಸುಧಾರಣೆಗೆ ₹ 50 ಲಕ್ಷ, ಪಟ್ಟಣದ ವಾರ್ಡ್ ಸಂಖ್ಯೆ 14ರ ಪ್ರಕಾಶ ನಗರದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ₹ 1.32 ಕೋಟಿ, ವಡಗೋಲ ಗ್ರಾಮದ ಮುತ್ತಲಕೋಡಿ ಬೀರೇಶ್ವರ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ₹ 50 ಲಕ್ಷ ಬಿಡುಗಡೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗಣೇಶ ಹುಕ್ಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT