ADVERTISEMENT

ಬೆಳಗಾವಿ: ಜಿತೋ ಸಂಸ್ಥೆಯಿಂದ ವನಮಹೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 13:53 IST
Last Updated 30 ಜುಲೈ 2021, 13:53 IST
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಮಹಾವೀರ ಗೋಶಾಲೆ ಆವರಣದಲ್ಲಿ ಜಿತೋ ಸಂಸ್ಥೆಯಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಆರ್‌ಎಫ್‌ಒ ಪ್ರಶಾಂತ ಜೈನ, ಸುನೀಲ ಕಟಾರಿಯಾ, ವಿಕ್ರಮ ಜೈನ ಚಾಲನೆ ನೀಡಿದರು
ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಮಹಾವೀರ ಗೋಶಾಲೆ ಆವರಣದಲ್ಲಿ ಜಿತೋ ಸಂಸ್ಥೆಯಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಆರ್‌ಎಫ್‌ಒ ಪ್ರಶಾಂತ ಜೈನ, ಸುನೀಲ ಕಟಾರಿಯಾ, ವಿಕ್ರಮ ಜೈನ ಚಾಲನೆ ನೀಡಿದರು   

ಬೆಳಗಾವಿ: ಜಿತೋ (ಜೈನ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ) ಸಂಸ್ಥೆಯ ವತಿಯಿಂದ ತಾಲ್ಲೂಕಿನ ಹಲಗಾ ಗ್ರಾಮದ ಮಹಾವೀರ ಗೋಶಾಲೆ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಈಚೆಗೆ ನಡೆಯಿತು.

ಆರ್‌ಎಫ್‌ಒ ಪ್ರಶಾಂತ ಜೈನ್‌ ಚಾಲನೆ ನೀಡಿದರು. ‘ಸಮಾಜ ಸೇವಾ ಸಂಸ್ಥೆಗಳು ಈ ರೀತಿಯಲ್ಲಿ ಬೃಹತ್ ವೃಕ್ಷಾಪರೋಪಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಸಾಮಾಜಿಕ ಅರಣ್ಯ ಬೆಳೆಸಲು ಸಹಕಾರಿಯಾಗಲಿದೆ. ಅಲ್ಲದೇ ಮುಂದಿನ ಪೀಳಿಗೆಗೆ ಅದ್ಭುತ ಕೊಡುಗೆಯನ್ನು ನಾವು ನೀಡಬಹುದಾಗಿದೆ. ಸಸಿಗಳನ್ನು ನೆಡುವ ಜೊತೆಗೆ ಅವುಗಳ ಪಾಲನೆಯೂ ಆಗಬೇಕು’ ಎಂದರು.

ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸುನೀಲ ಕಟಾರಿಯಾ, ‘400 ಸಸಿಗಳನ್ನು ನೆಡಲಾಗುತ್ತಿದೆ. ಸಂಸ್ಥೆಯು ಕೈಗೊಂಡಿರುವ ಈ ಅಭಿಯಾನ ಒಂದು ವರ್ಷದವರೆಗೆ ನಡೆಯಲಿದೆ. ಸಸಿಗಳ ಬಗ್ಗ ವಿಶೇಷ ನಿಗಾ ವಹಿಸಲಾಗುವುದು. ಇದಕ್ಕಾಗಿ ಇಬ್ಬರು ಸಿಬ್ಬಂದಿ ನೇಮಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಮಹಾವೀರ ಗೋಶಾಲೆಯ ಅಧ್ಯಕ್ಷ ಜಬ್ಬರಚಂದ ಮಾತನಾಡಿ, ಜಿತೋ ಮಹಿಳಾ ವಿಭಾಗದ ಅಧ್ಯಕ್ಷೆ ಅರುಣಾ ಶಹಾ ಮಾತನಾಡಿದರು.

ಜಿತೋ ಸಂಸ್ಥೆಯ ವಿಕ್ರಮ ಜೈನ, ಅಮಿತ ದೋಷಿ, ಧನುಸುಖ ಜೈನ, ಜೀವನ ಪೋರವಾಲ, ಮನೋಜ ಸಂಚೇತಿ, ಮಹೇಂದ್ರ ಪೋರವಾಲ, ಜಯದೀಪ ಲೆಂಗಡೆ, ಸುದರ್ಶನ ಶಿಂತ್ರಿ, ಜಿನದತ್ತ ಚಿಕ್ಕಪರಪ್ಪ ಇದ್ದರು.

ವೃಕ್ಷಾರೋಪಣ ಕಾರ್ಯಕ್ರಮ ಸಂಯೋಜಕ ಮಹೇಂದ್ರ ಪರಮಾರ ಸ್ವಾಗತಿಸಿದರು. ಜಿತೋ ಸಂಸ್ಥೆಯ ಕಾರ್ಯದರ್ಶಿ ಅಂಕಿತ ಖೋಡಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.