ADVERTISEMENT

ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಬೀಳ್ಕೊಡುಗೆ, ಸ್ವಾಗತ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 12:30 IST
Last Updated 16 ಜನವರಿ 2022, 12:30 IST
ನೇಸರಗಿ ಸಮೀಪದ ಗಜಮಿನಾಳ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಿಂದ ವರ್ಗವಾದ ಶಿಕ್ಷಕರನ್ನು ಬೀಳ್ಕೊಡಲಾಯಿತು
ನೇಸರಗಿ ಸಮೀಪದ ಗಜಮಿನಾಳ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಿಂದ ವರ್ಗವಾದ ಶಿಕ್ಷಕರನ್ನು ಬೀಳ್ಕೊಡಲಾಯಿತು   

ನೇಸರಗಿ: ಸಮೀಪದ ಗಜಮಿನಾಳ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 20 ವರ್ಷ ಕಾರ್ಯನಿರ್ವಹಿಸಿದ ಶಿಕ್ಷಕ ಐ.ಎಸ್. ಗಡದವರ ಹಾಗೂ 11 ವರ್ಷಗಳಿಂದಿದ್ದ ಜಿ.ಐ. ದಾರಪ್ಪನವರ ಅವರು ದೇಶನೂರ ಶಾಲೆಗೆ ವರ್ಗಾವಣೆಯಾದ ಪ್ರಯುಕ್ತ ಸನ್ಮಾನಿಸಿ ಈಚೆಗೆ ಬೀಳ್ಕೊಡಲಾಯಿತು.

ಇದೇ ವೇಳೆ ಹಣಬರಹಟ್ಟಿ ಶಾಲೆಯಿಂದ ವರ್ಗಾವಣೆಯಾಗಿ ಬಂದ ಶಿಕ್ಷಕ ಎ.ಎಸ್. ಉಳಿವಿ ಅವರನ್ನು ಸ್ವಾಗತಿಸಿಕೊಳ್ಳಲಾಯಿತು.

ಮುಖ್ಯಶಿಕ್ಷಕ ಎಂ.ಎಲ್. ಮಾರಿಹಾಳ, ಹಣಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಿರು ವಾರಿ, ಅಡುಗೆ ಸಿಬ್ಬಂದಿ, ಅಂಗನವಾಡಿ ಶಿಕ್ಷಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ADVERTISEMENT

ಶಿಕ್ಷಕ ಎಸ್.ಎ. ನಲವಡೆ ಸ್ವಾಗತಿಸಿದರು. ಶಿಕ್ಷಕ ಯು.ಎಸ್. ಹುಡೇದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.