
ಕಾಗವಾಡ: ತಾಲ್ಲೂಕಿನ ಐನಾಪುರ ಪಟ್ಟಣದ ಸಿದ್ಧೇಶ್ವರ ಜಾತ್ರೆ ಜ. 14ರಂದು ನಡೆಯಲಿದ್ದು, ಕೃಷಿ ಮೇಳ ಐದು ದಿನಗಳ ಕಾಲ ನಡೆಯಲಿರುವುದರಿಂದ ಜನದಟ್ಟಣೆ ಇರುವುದು ಸಹಜ. ಯಾವುದೇ ಅಹಿತಕರ ಘಟನೆಗಳು ನಡೆದಂತೆ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಜಾತ್ರಾ ಕಮಿಟಿಯವರು ನಿಗಾ ವಹಿಸಬೇಕು ಎಂದು ಅಥಣಿ ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ ಹೇಳಿದರು.
ಬುಧವಾರ ಪಟ್ಟಣದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರೆಯ ಪೂರ್ವಭಾವಿ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
‘ಜಾತ್ರೆ ನಡೆಸಲು ಹಾಗೂ ಶರ್ಯತ್ತುಗಳನ್ನು ನಡೆಸಲು ಸರ್ಕಾರದ ನಿಯಮಗಳ ನಿರ್ಬಂಧ ಇರುತ್ತವೆ. ಅವುಗಳನ್ನು ಪಾಲಿಸಿ, ಷರ್ಯತ್ತುಗಳಲ್ಲಿ ಭಾಗವಹಿಸಿದ ದನಗಳ ವೈದ್ಯಕೀಯ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಬೇಕು. ದನಗಳಿಗೆ ಬಡಿಗೆಗಳಿಂದ ಬಡಿಯುವುದು ಹಾಗೂ ಇತರ ಯಾವುದೇ ತರಹದ ಪ್ರಾಣಿ ಹಿಂಸೆ ಆಗದಂತೆ ನೋಡಿಕೊಳ್ಳುವುದು ಜಾತ್ರಾ ಕಮಿಟಿಯವರ ಕರ್ತವ್ಯ’ ಎಂದು ಹೇಳಿದರು.
ಸಿಪಿಐ ಸಂತೋಷ ಹಳ್ಳೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಪಿಎಸ್ಐ ರಾಘವೇಂದ್ರ ಖೋತ, ಜಾತ್ರಾ ಕಮಿಟಿಯ ಅಧ್ಯಕ್ಷ ದಾದಾಸಾಬ ಜಂತೆನ್ನವರ, ಉಪಾಧ್ಯಕ್ಷ ಸಂತೋಷ ಪಾಟೀಲ, ಪಶು ವೈಧ್ಯಾಧಿಕಾರಿ ಅಭಿನಂದನ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯ ಅರುಣ ಗಾಣಿಗೇರ, ಸಂಜಯ ಬಿರಡಿ, ಸುಭಾಷಗೌಡ ಪಾಟೀಲ, ಹರ್ಷವರ್ಧನ ಪಾಟೀಲ, ಕುಮಾರ ಅಪರಾಜ, ಪ್ರಕಾಶ ಕೋರ್ಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.