ADVERTISEMENT

ಕಬ್ಬಿಣಾಂಶದ ಮಾತ್ರೆ ಸೇವಿಸಿ  ಅಸ್ವಸ್ಥಗೊಂಡಿದ್ದ 65 ಮಕ್ಕಳೂ ಗಣಮುಖ

ಆಸ್ಪತ್ರೆಯಿಂದ ಮನೆಗೆ ತೆರಳಿದ ಮಕ್ಕಳು 

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 8:23 IST
Last Updated 26 ಜುಲೈ 2022, 8:23 IST

ಸವದತ್ತಿ (ಬೆಳಗಾವಿ ಜಿಲ್ಲೆ): ಶಾಲೆಯಲ್ಲಿ ಬಿಸಿಯೂಟ ಮಾಡಿ, ಕಬ್ಬಿಣಾಂಶದ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ತಾಲ್ಲೂಕಿನ ಬಸಿಡೋಣಿಯ ಎಲ್ಲ 65 ಮಕ್ಕಳು ಗುಣಮುಖರಾಗಿದ್ದು, ಮಂಗಳವಾರ ಬೆಳಿಗ್ಗೆ ಆಸ್ಪತ್ರೆಯಿಂದ ಮನೆಗೆ ತೆರಳಿದರು.

ಸೋಮವಾರ ಮಧ್ಯಾಹ್ನ ಶಾಲೆಯಲ್ಲಿ 5, 6 ಹಾಗೂ 7ನೇ ತರಗತಿಯ 239 ಮಕ್ಕಳು ಬಿಸಿಯೂಟ ಮಾಡಿದ್ದರು. 'ಅನಿಮಿಯ ಮುಕ್ತ ಭಾರತ' ಯೋಜನೆಯಡಿ ನೀಡುವ ಫಾಲಿಕ್ ಆ್ಯಸಿಡ್ಮಾತ್ರೆಗಳನ್ನು ನುಂಗಿದ್ದರು. ಸಂಜೆಯ ಹೊತ್ತಿಗೆ ಒಬ್ಬೊಬ್ಬರಿಗೆ ತಲೆನೋವು, ತಲೆಸುತ್ತು, ಹೊಟ್ಟೆನೋವು ಕಾಣಿಸಿಕೊಂಡಿತು. ತಡರಾತ್ರಿಯ ಹೊತ್ತಿಗೆ 65 ಮಕ್ಕಳನ್ನು ಆಂಬುಲೆನ್ಸ್ ಮೂಲಕ ಕಂದು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೇಗ ಗುಣವಾದ ಕೆಲವು ಮಕ್ಕಳನ್ನು ರಾತ್ರಿಯೇ ಮನೆಗೆ ಕಳುಹಿಸಲಾಯಿತು. ಮಂಗಳವಾರ ಬೆಳೆಗ್ಗೆ ಎಲ್ಲರೂ ಚೇತರಿಸಿಕೊಂಡಿದ್ದು, ಆಂಬುಲೆನ್ಸ್ ಮೂಲಕ ಮನೆಗೆ ತೆರಳಿದರು.

ADVERTISEMENT

ತಾಲ್ಲೂಕು ವೈದ್ಯಾಧಿಕಾರಿ ಡಾ. ಮಹೇಶ ಚಿತ್ತರಗಿ ನೇತೃತ್ವದಲ್ಲಿ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಮಕ್ಕಳಿಗೆ ಚಿಕಿತ್ಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.