ADVERTISEMENT

ಸ್ಮಾರ್ಟ್‌ ಸಿಟಿ ಕಾಮಗಾರಿ ಕತ್ತಲಲ್ಲಿ ಪರಿಶೀಲನೆ!

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 7:15 IST
Last Updated 18 ಡಿಸೆಂಬರ್ 2019, 7:15 IST
ಸ್ಮಾರ್ಟ್‌ ಸಿಟಿ ಪರಿಶೀಲನೆ
ಸ್ಮಾರ್ಟ್‌ ಸಿಟಿ ಪರಿಶೀಲನೆ   

ಬೆಳಗಾವಿ: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಸ್ಮಾರ್ಟ್‌ ಸಿಟಿ ಸ್ಪೆಷಲ್ ಪರ್ಪಸ್ ವೆಹಿಕಲ್ ಅಧ್ಯಕ್ಷ ರಾಕೇಶ್ ಸಿಂಗ್ ಅವರು ಮಂಗಳವಾರ ರಾತ್ರಿ ಕತ್ತಲಲ್ಲಿ ಪರಿಶೀಲಿಸಿದ್ದಾರೆ!

ಕಾಂಗ್ರೆಸ್ ರಸ್ತೆ, ಕಾಲೇಜು ರಸ್ತೆ, ಧರ್ಮನಾಥ ಭವನ, ಕಣಬರ್ಗಿ ಕೆರೆ ಕಾಮಗಾರಿ ಸ್ಥಳಕ್ಕೆ ತೆರಳಿದ್ದ ಅವರು, ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಮೊದಲಾದವರು ತಮ್ಮ ಮೊಬೈಲ್ ಟಾರ್ಚ್‌ ಬೆಳಕಲ್ಲಿ ‘ಕಾಮಗಾರಿಗಳ ಗುಣಮಟ್ಟದ ದರ್ಶನ’ ಮಾಡಿಸಿದ್ದಾರೆ. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಿಂಗ್ ಸೂಚಿಸಿದ್ದಾರೆ.

ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ನೀಡಿರುವ ಕುರೇರ, ‘ರಸ್ತೆ ಕಾಮಗಾರಿಗಳನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ವಿಶೇಷ ನಿಗಾ ವಹಿಸಲಾಗಿದೆ. ಸಾರ್ವಜನಿಕರ ಸಹಕಾರದಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳಾದ ಆರ್.ಎಸ್. ನಾಯಕ, ಅಜಿತ್ ಪಾಟೀಲ, ಕಿರಣ ಸುಬ್ಬರಾವ್, ಉದಯಕುಮಾರ, ಪಿ.ಎಂ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.