ADVERTISEMENT

‘ನಾಯಕತ್ವ ಗುಣ ಬೆಳೆಸುವ ಜೆಸಿಐ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 16:50 IST
Last Updated 26 ಜನವರಿ 2022, 16:50 IST
ಗೋಕಾಕದಲ್ಲಿ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರಜನಿಕಾಂತ್ ಮಾಳೋದೆ ಮಂಗಳವಾರ ಅಧಿಕಾರ ಸ್ವೀಕರಿಸಿದರು
ಗೋಕಾಕದಲ್ಲಿ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರಜನಿಕಾಂತ್ ಮಾಳೋದೆ ಮಂಗಳವಾರ ಅಧಿಕಾರ ಸ್ವೀಕರಿಸಿದರು   

ಗೋಕಾಕ: ‘ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ’ ಎಂದು ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷೆ ದೀಪಿಕಾ ಬಿದರಿ ಹೇಳಿದರು.

ನಗರದಲ್ಲಿ ಜೆಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಕ್ಷೇತ್ರಗಳ ವ್ಯಕ್ತಿಗಳಿಗೆ ವಿಶೇಷ ತರಬೇತಿ ನೀಡಿ ಬದಲಾವಣೆಯೊಂದಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುವಂತೆ ಸಂಸ್ಥೆಯು ಪ್ರೆರೇಪಿಸುತ್ತಿದೆ. ಕೋವಿಡ್, ಪ್ರವಾಹದಂತಹ ಸಂಕಷ್ಟದ ಸಂದರ್ಭದಲ್ಲಿ ಉತ್ತಮ ಕಾರ್ಯ ಮಾಡಿದೆ’ ಎಂದರು.

ADVERTISEMENT

ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ, ಉಪಕಾರಾಗೃಹದ ಸೂಪರಿಂಟೆಂಡೆಂಟ್ ಲಕ್ಷ್ಮಿ ಹಿರೇಮಠ, ವಲಯ ಜೆಸಿಐ ಉಪಾಧ್ಯಕ್ಷ ಪ್ರವೀಣ ದೇಶಪಾಂಡೆ, ವಿಷ್ಣು ಲಾತೂರ, ಸಂಸ್ಥೆಯ ನೂತನ ಅಧ್ಯಕ್ಷ ರಜನಿಕಾಂತ್ ಮಾಳೋದೆ, ಕಾರ್ಯದರ್ಶಿ ಸಂತೋಷ ಹವಾಲ್ದಾರ, ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ನಂದಗಾವಿ, ಕಾರ್ಯದರ್ಶಿ ಸುರ್ವರ್ಣಾ ಹವಾಲ್ದಾರ, ಜೂನಿಯರ್ ಜೆಸಿಐ ಅಧ್ಯಕ್ಷೆ ದೀಪ್ತಿ ಅಮ್ಮಣಗಿ, ಕಾರ್ಯದರ್ಶಿ ನಂದಿನಿ ಲಾತೂರ, ಹಿಂದಿನ ಪದಾಧಿಕಾರಿಗಳಾದ ಚಂದ್ರಶೇಖರ ಕಡೇವಾಡಿ, ಶೇಖರ ಉಳ್ಳೇಗಡ್ಡಿ, ನೇತ್ರಾವತಿ ಲಾತೂರ, ಮೀನಾಕ್ಷಿ ಸವದಿ, ಕವಿತಾ ತುಪ್ಪದ, ದೀಪಾ, ರಾಜೇಶ್ವರಿ ಹಳ್ಳಿ, ಸಂಜೀವ ಜಾಧವ, ರಮಾಕಾಂತ ಕೊಸಂದಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.