ADVERTISEMENT

ಸೂರ್ಯಗ್ರಹಣ: ಹಲವೆಡೆ ದೇವರ ದರ್ಶನ ಬಂದ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 10:20 IST
Last Updated 25 ಅಕ್ಟೋಬರ್ 2022, 10:20 IST
ಸವದತ್ತಿಯ ಯಲ್ಲಮ್ಮನ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಭಕ್ತರು ಬರಲಿಲ್ಲ
ಸವದತ್ತಿಯ ಯಲ್ಲಮ್ಮನ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಭಕ್ತರು ಬರಲಿಲ್ಲ   

ಬೆಳಗಾವಿ: ಕೇತುಗ್ರಸ್ಥ ಖಂಡಗ್ರಾಸ (ಖಗ್ರಾಸ) ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ ಮೂರ್ತಿಗಳ ದರ್ಶನ ಬಂದ್‌ ಮಾಡಲಾಯಿತು. ದೀಪಾವಳಿ ಹಬ್ಬದ ಕಾರಣ ದೇವಸ್ಥಾನಗಳನ್ನು ಮುಚ್ಚಲಿಲ್ಲ. ಆದರೆ, ಮೂರ್ತಿಗಳ ಮೇಲೆ ಬಿಲ್ವಪತ್ರಿ, ಶಾಲುಗಳನ್ನು ಹೊದಿಸಿ ಮರೆ ಮಾಟಲಾಯಿತು.

ಸಂಜೆ 4.30ಕ್ಕೆ ಸರಿಯಾಗಿ ಬೆಳಗಾವಿಯಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ ಎಂದು ಅರ್ಚಕರು ಮಾಹಿತಿ ನೀಡಿದರು. ಸೋಮವಾರವೇ ಹಲವು ದೇವಸ್ಥಾನಗಳಲ್ಲಿ ಗ್ರಹಣ ಮಾಹಿತಿ ಹಾಗೂ ದೋಷ ನಿವಾರಣಾ ವಿಧಾನಗಳ ಬಗ್ಗೆ ವಿವರ ನೀಡಲಾಯಿತು. ಹೀಗಾಗಿ, ಮಂಗಳವಾರ ನಸುಕಿನಲ್ಲೇ ಹಲವರು ದೇವರ ಪೂಜೆ ನೆರವೇರಿಸಿದರು.

‘ದಕ್ಷಿಣ ಕಾಶಿ’ ಎಂದೇ ಹೆಸರಾದ ಇಲ್ಲಿನ ಕಪಿಲೇಶ್ವರ ಮಂದಿರದಲ್ಲಿ ಬೆಳಿಗ್ಗೆಯಿಂದ ಜನಜಂಗುಳಿ ಕಂಡುಬಂತು. ಗ್ರಹಣ ಆರಂಭವಾಗುವ ಮುನ್ನವೇ ಅರ್ಚಕರು ಪೀತಾಂಬರ ಹೊದಿಸಿ ಶಿವನ ಮೂರ್ತಿಯನ್ನು ಮುಚ್ಚಿದರು. ನಂತರ ಮಹಾಮೃತ್ಯುಂಜಯ ಹೋಮ ಆರಂಭಿಸಿದರು.

ADVERTISEMENT

ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ಚಿಂಚಿಲಿ ಮಾಯಕ್ಕ ದೇವಸ್ಥಾನದಲ್ಲಿ ದೇವರ ದರ್ಶನ ಮುಂದುವರಿಸಿದ್ದರೂ ಪೂಜೆ, ಪ್ರಸಾದ, ಆರತಿ ಬಂದ್‌ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.