ಬೆಳಗಾವಿ: ತಾಲ್ಲೂಕಿನ ನಿಂಗೆನಟ್ಟಿ ಗ್ರಾಮದ ಸೈನಿಕ ರವಿ ಯಲ್ಲಮ್ಮ ತಳವಾರ (35) ಅವರು ಬುಧವಾರ ಬೆಳಿಗ್ಗೆ ನಾಗಾಲ್ಯಾಂಡ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರವಿ ತಳವಾರ ಅವರು ನಾಗಾಲ್ಯಾಂಡ್‌ನ ಅಸ್ಸಾಂ ರೈಫಲ್ಸ್‌ನ 41ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬುಧವಾರ ಸೇವೆಗೆ ತೆರಳುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಸೇನಾ ವಾಹನವು ನಾಗಾಲ್ಯಾಂಡ್‌ನ ಘಾಟಿಯ ಆಳವಾದ ಕಂದಕಕ್ಕೆ ಬಿದ್ದಿತು. ರವಿ ಸ್ಥಳದಲ್ಲೇ ಮೃತಪಟ್ಟರು.
ಕಳೆದ 16 ವರ್ಷಗಳಿಂದ ಸೇನೆಯಲ್ಲಿದ್ದ ಅವರು, ಎರಡೇ ವರ್ಷಗಳಲ್ಲಿ ನಿವೃತ್ತಿ ಹೊಂದುವವರಿದ್ದರು. ಅವರಿಗೆ ಪತ್ನಿ ಶೀತಲ್, ಪುತ್ರಿ ಹಾಗೂ ಪುತ್ರ ಇದ್ದಾರೆ.
‘ಸೇನಾ ವಾಹನದ ಅಪಘಾತ ಹಾಗೂ ಸೈನಿಕ ಹುತಾತ್ಮರಾಗಿರುವ ಬಗ್ಗೆ ಸೇನೆಯಿಂದ ಈವರೆಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶುಕ್ರವಾರ ಮಾಹಿತಿ ಬರುವ ಸಾಧ್ಯತೆ ಇದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.