ಬೈಲಹೊಂಗಲ: ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಸೆ.10ರಂದು ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ, ಕಿತ್ತೂರು ರಾಣಿ ಚನ್ನಮ್ಮ ಆಂಗ್ಲ ಮಾಧ್ಯಮ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಪ್ರೌಢ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣಗಳಲ್ಲಿ ನಡೆಯಲಿದೆ.
17 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಆ.27ರಿಂದ ಸೆ.2ರ ವರೆಗೆ ಕಾರ್ಖಾನೆ ಆಡಳಿತ ಕಚೇರಿಯಲ್ಲಿ ಅಭ್ಯರ್ಥಿಗಳಿಂದ ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸುವ ಕಾರ್ಯ ನಡೆಯಲಿದೆ. ಸೆ.3ರಂದು ಮಧ್ಯಾಹ್ನ 12ಕ್ಕೆ ಕಾರ್ಖಾನೆ ಕಚೇರಿಯಲ್ಲಿ ರಿಟರ್ನಿಂಗ್ ಅಧಿಕಾರಿಯಿಂದ ನಾಮ ನಿರ್ದೇಶನ ಪತ್ರಗಳ ಪರಿಶೀಲನೆ, ಸೆ.4ರಂದು ನಾಮನಿರ್ದೇಶನ ಪತ್ರ ವಾಪಸ್ ಪಡೆಯುವುದು ಹಾಗೂ ಅಗತ್ಯತೆ ಕಂಡು ಬಂದರೆ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚುವುದು. ಕಾರ್ಖಾನೆ ನೋಟೀಸ್ ಬೋರ್ಡ ಮೇಲೆ ಕ್ರಮಬದ್ಧವಾಗಿ ಸ್ಪರ್ಧಾಳು ಪಟ್ಟಿ ಪ್ರಕಟಣೆ ಮಾಡಲಾಗುವುದು. ಸೆ.6ರಂದು ಕಾರ್ಖಾನೆ ನೋಟಿಸ್ ಬೋರ್ಡ್ ಮೇಲೆ ಮಧ್ಯಾಹ್ನ 3ಕ್ಕೆ ಹಂಚಿಕೆ ಮಾಡಲಾದ ಚಿಹ್ನೆಯೊಂದಿಗೆ ಮಾದರಿ ಮತಪತ್ರ ಪ್ರಕಟಣೆ ಮಾಡಲಾಗುವುದು.
ಸೆ.10ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ, ನಂತರ ಮತ ಏಣಿಕೆ ನಂತರ ಚುನಾವಣೆ ಫಲಿತಾಂಶ ಪ್ರಕಟಣೆ ಮಾಡಲಾಗುವುದು ಎಂದು ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣಾಧಿಕಾರಿ ಮಣಿ ಎಂ.ಎನ್.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.