ADVERTISEMENT

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 13:43 IST
Last Updated 22 ಜುಲೈ 2021, 13:43 IST
ಬೆಳಗಾವಿಯ ಸರ್ದಾರ್ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಮಳೆ ಇದ್ದಿದ್ದರಿಂದಾಗಿ ಕೊಡೆಗಳ ಸಹಾಯ ಪಡೆದಿದ್ದಾರೆಪ್ರಜಾವಾಣಿ ಚಿತ್ರ
ಬೆಳಗಾವಿಯ ಸರ್ದಾರ್ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಮಳೆ ಇದ್ದಿದ್ದರಿಂದಾಗಿ ಕೊಡೆಗಳ ಸಹಾಯ ಪಡೆದಿದ್ದಾರೆಪ್ರಜಾವಾಣಿ ಚಿತ್ರ   

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯು ಯಶಸ್ವಿ ಮುಕ್ತಾಯ ಕಂಡಿತು.

2ನೇ ಹಾಗೂ ಕೊನೆಯ ದಿನವಾದ ಗುರುವಾರ ಮಳೆಯ ನಡುವೆಯೂ ವಿದ್ಯಾರ್ಥಿಗಳು ಸುರಕ್ಷಾ ಪರಿಕರಗಳೊಂದಿಗೆ ಬಂದು ಪರೀಕ್ಷೆಗೆ ಹಾಜರಾದರು. ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆ ವಿಷಯದ ಪರೀಕ್ಷೆ ನಡೆಯಿತು. ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ 269 ವಿದ್ಯಾರ್ಥಿಗಳು ಗೈರುಹಾಜರಾದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಾಯಿಸಿದ್ದ 35,308 ವಿದ್ಯಾರ್ಥಿಗಳ ಪೈಕಿ 35,198 ಮಂದಿ (ಶೇ 99.68ರಷ್ಟು) ಹಾಜರಾದರು. 110 ವಿದ್ಯಾರ್ಥಿಗಳು ಗೈರುಹಾಜರಾದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ 99.70ರಷ್ಟು ವಿದ್ಯಾರ್ಥಿಗಳು ಹಾಜರಾದರು. 221 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 45,049 ಮಂದಿ ನೋಂದಾಯಿಸಿದ್ದರು. ಇವರಲ್ಲಿ 44,890 ಬಂದಿದ್ದರು. 159 ಮಂದಿ ಬಂದಿರಲಿಲ್ಲ.

ADVERTISEMENT

‘ಮಳೆಯಿಂದಾಗಿ ವಿದ್ಯಾರ್ಥಿಗಳಿಗಾಗಲಿ, ಸಿಬ್ಬಂದಿಗಾಗಲಿ ತೊಂದರೆ ಆಗಿಲ್ಲ. ಎಲ್ಲ ಕೇಂದ್ರಗಳಲ್ಲೂ ಪರೀಕ್ಷೆಯು ಸುಗಮವಾಗಿ ನಡೆದಿದೆ. ಯಾವುದೇ ಗೊಂದಲ ಉಂಟಾಗಿಲ್ಲ. ಪರೀಕ್ಷಾ ಅಕ್ರಮ ವರದಿಯಾಗಿಲ್ಲ. ಎಲ್ಲ ಕೇಂದ್ರಗಳಲ್ಲೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಯಿತು’ ಎಂದು ಡಿಡಿಪಿಐಗಳಾದ ಡಾ.ಆನಂದ ಪುಂಡಲೀಕ ಹಾಗೂ ಗಜಾನನ ಮನ್ನಿಕೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.