ADVERTISEMENT

ಎಸ್ಸೆಸ್ಸೆಲ್ಸಿ: ಬೆಳಗಾವಿ ಜಿಲ್ಲೆಯ 10 ಮಂದಿ ಟಾಪರ್ಸ್‌

​ಪ್ರಜಾವಾಣಿ ವಾರ್ತೆ
Published 19 ಮೇ 2022, 8:28 IST
Last Updated 19 ಮೇ 2022, 8:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿದ 145 ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೈಕಿ ಜಿಲ್ಲೆಯ 10 ಮಂದಿ ಇದ್ದಾರೆ. ಈ ಪೈಕಿ 6 ವಿದ್ಯಾರ್ಥಿಗಳು ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ ಸೇರಿದವರಾಗಿದ್ದು, ನಾಲ್ವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯವರಾಗಿದ್ದಾರೆ.

ಇವರಲ್ಲಿ ಕನ್ನಡ ಮಾಧ್ಯಮದವರು ಮೂವರು ಹಾಗೂ ಉಳಿದವರು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಾಗಿದ್ದಾರೆ.

ಎರಡೂ ಶೈಕ್ಷಣಿಕ ಜಿಲ್ಲೆಗಳು ‘ಎ’ ಗ್ರೇಡ್ ಪಡೆದಿವೆ.

ADVERTISEMENT

ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯ ಯರಗಟ್ಟಿ ತಾಲ್ಲೂಕು ಸತ್ತಿಗೇರಿ ಪಬ್ಲಿಕ್ ಶಾಲೆಯ ಸಹನಾ ರಾಯರ, ಖಾನಾಪುರ ತಾಲ್ಲೂಕಿನ ನಂದಗಡದ ಸಂಗೊಳ್ಳಿರಾಯಣ್ಣ ಸ್ಮಾರಕ ವಸತಿ ಶಾಲೆಯ ಸ್ವಾತಿ ಸುರೇಶ ತೊಲಗಿ, ಚಿಕ್ಕೋಡಿ ತಾಲ್ಲೂಕು ಬೋಜ್ ಗ್ರಾಮದ ನ್ಯೂ ಸೆಕೆಂಡರಿ ಶಾಲೆಯ ವರ್ಷಾ ಅನಿಲ ಪಾಟೀಲ ಮಿಂಚಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಂಭು ಶಿವಾನಂದ ಖಾನಾಯಿ, ರಾಮದುರ್ಗದ ಕೇಂಬ್ರಿಡ್ಜ್‌ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಆದರ್ಶ ಬಸವರಾಜ ಹಾಲಭಾವಿ, ಬೆಳಗಾವಿ ನಗರದ ತಿಲಕವಾಡಿಯ ಎಂ.ವಿ. ಹೇರವಾಡಕರ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಅಮೋಘ ಎನ್. ಕೌಶಿಕ್, ರಾಮದುರ್ಗದ ಲಕ್ಷ್ಮಿ ನಗರದ ಬಸವೇಶ್ವರ ಇಂಗ್ಲಿಷ್ ಮಾಧ್ಯಮ ಶಾಲೆಯ ರೋಹಿಣಿ ಗೌಡರ, ರಾಯಬಾಗ ತಾಲ್ಲೂಕು ಹಾರೂಗೇರಿಯ ಭಗವಾನ್‌ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಸೃಷ್ಟಿ ಮಹೇಶ ಪತ್ತಾರ, ಅಥಣಿಯ ಅಥಣಿ ವಿದ್ಯಾವರ್ಧಕ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಶಾಲೆಯ ವಿವೇಕಾನಂದ ಮಹಾಂತೇಶ ಹೊನ್ನಾಳಿ ಮತ್ತು ಬೆಳಗಾವಿಯ ತಿಲಕವಾಡಿಯ ಕೆಎಲ್‌ಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವೆಂಕಟೇಶ ಯೋಗೇಶ ಡೋಂಗ್ರೆ ಸಂಪೂರ್ಣ ಅಂಕಗಳನ್ನು ಗಳಿಸಿ ಸಾಧನೆ ತೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.