ADVERTISEMENT

ರಾಜ್ಯ ಸರ್ಕಾರದಿಂದ ಜೈನ ಸಮಾಜ ನಿರ್ಲಕ್ಷ್ಯ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:36 IST
Last Updated 7 ಜೂನ್ 2025, 14:36 IST
ಕಾಗವಾಡ ತಾಲ್ಲೂಕಿನ ಐನಾಪೂರ ಪಟ್ಟಣದಲ್ಲಿ ನಡೆದ ಜೈನ ಸಮಾವೇಶದಲ್ಲಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿದರು
ಕಾಗವಾಡ ತಾಲ್ಲೂಕಿನ ಐನಾಪೂರ ಪಟ್ಟಣದಲ್ಲಿ ನಡೆದ ಜೈನ ಸಮಾವೇಶದಲ್ಲಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿದರು   

ಕಾಗವಾಡ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜೈನ ಸಮುದಾಯದ ಅಭಿವೃದ್ಧಿಗೆ  ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಅವುಗಳನ್ನು ತಡೆ ಹಿಡಿದು ಜೈನ ಸಮಾಜಕ್ಕೆ ಅನ್ಯಾಯ ಮಾಡಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ತಾಲ್ಲೂಕಿನ ಐನಾಪೂರ ಪಟ್ಟಣದಲ್ಲಿ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಜೈನ ಸಮಾವೇಶದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೈನ ಸಮಾಜ ತಾತ್ವಿಕ ಹಾಗೂ ಅಹಿಂಸಾ ತತ್ವಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರವು ಸಣ್ಣ ಸಣ್ಣ ಸಮಾಜಗಳಿಗೆ ನಿಗಮ ಮಂಡಳ ನೀಡಿದೆ. ಆದರೆ, ಜೈನ ಸಮಾಜಕ್ಕೆ ನೀಡದೆ ಬರೀ ಓಲೈಕೆ ರಾಜಕಾರಣ ಮಾಡುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ರಾಜಕೀಯ, ಶೈಕ್ಷಣಿಕ,ಸಾಮಾಜಿಕವಾಗಿ ಆಗುತ್ತಿರುವ ಅನ್ಯಾಯಗಳ ವಿರುದ್ಧ ಜೈನ ಸಮಾಜ ದನಿ ಎತ್ತಬೇಕು. ಈ ಹಿನ್ನೆಲೆ ಜೈನ ಸಮಾವೇಶದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸವನ್ನು ಗುಣಧರ ನಂಧಿ ಮಹಾರಾಜರ‌ ನೇತೃತ್ವದಲ್ಲಿ ಆಗುತ್ತಿರುವುದು ಸೂಕ್ತವಾಗಿದೆ’ ಎಂದರು.

ಗುಣಧರನಂಧಿ ಮಹಾರಾಜರು ಮಾತನಾಡಿ, ‘ಭಾನುವಾರದ ಸಮಾವೇಶದಲ್ಲಿ ರಾಜ್ಯಪಾಲರು, ಹಲವು ಸಚಿವರು, ಶಾಸಕರು ಭಾಗಹಿಸಲಿದ್ದಾರೆ. ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿದಿದ್ದರೆ ಕಠಿಣ ನಿರ್ಧಾವನ್ನು ಅದೇ ವೇದಿಕೆಯಲ್ಲಿ ತಿಳಿಸಿಲಾಗುವುದು’ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಿಗಿಮಠ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆಣ್ಣವರ, ಮೋಹನ ಶಹಾ, ದೀಪಕ ಪಾಟೀಲ, ಅರುಣ ಯಲಗುದ್ರಿ, ಸಂಜಯ ಕೂಚನೂರೆ, ರಾಜು ಪಾಟೀಲ, ಸುನೀಲ ಪಾಟೀಲ, ಅಮರ ದುರ್ಗಣ್ಣನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.