ADVERTISEMENT

ರಾಜ್ಯಮಟ್ಟದ ಈಜು: ಅಜಿತಕುಮಾರ ದ್ವಿತೀಯ

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:27 IST
Last Updated 22 ಮೇ 2025, 15:27 IST
ರಾಜ್ಯಮಟ್ಟದ ಕ್ರೀಡಾಕೂಟದ 400 ಮಿಟರ್‌ ಫ್ರೀ ಸ್ಟೈಲ್‌ ಈಜು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಬೆಳಗಾವಿಯ ಅಜಿತಕುಮಾರ ಬಾಬು ಕಡಟ್ಟಿ ಅವರನ್ನು ಜಿಲ್ಲಾ ಬೆಲೀಫ್ ಮತ್ತು ಪ್ರೊಸೆಸ್ ಸರ್ವರ್ ಸಂಘದ ವತಿಯಿಂದ ಸನ್ಮಾನಿಸಲಾಯಿತು
ರಾಜ್ಯಮಟ್ಟದ ಕ್ರೀಡಾಕೂಟದ 400 ಮಿಟರ್‌ ಫ್ರೀ ಸ್ಟೈಲ್‌ ಈಜು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಬೆಳಗಾವಿಯ ಅಜಿತಕುಮಾರ ಬಾಬು ಕಡಟ್ಟಿ ಅವರನ್ನು ಜಿಲ್ಲಾ ಬೆಲೀಫ್ ಮತ್ತು ಪ್ರೊಸೆಸ್ ಸರ್ವರ್ ಸಂಘದ ವತಿಯಿಂದ ಸನ್ಮಾನಿಸಲಾಯಿತು   

ಬೆಳಗಾವಿ: ಶಿವಮೊಗ್ಗದಲ್ಲಿ ಈಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ, ಬೆಳಗಾವಿಯ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಅಜಿತಕುಮಾರ ಬಾಬು ಕಡಟ್ಟಿ ಅವರು 400 ಮಿಟರ್‌ ಫ್ರೀ ಸ್ಟೈಲ್‌ ಈಜು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ ಬೇಲಿಫ್ ಆಗಿರುವ ಅಜಿತಕುಮಾರ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಈ ಸಾಧನೆಗೆ ಬೆಳಗಾವಿ ಜಿಲ್ಲಾ ಬೆಲೀಫ್ ಮತ್ತು ಪ್ರೊಸೆಸ್ ಸರ್ವರ್ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಮೇಶ ಪಾಚ್ಚಪುರೆ ಮತ್ತು ಸಹೋದ್ಯೋಗಿಗಳಾದ ಶಿವಾನಂದ ನಾವಲಗಿ, ಶಿವಾಜಿ ಮೂರ್ಕಿಭಾವಿ, ಮಲ್ಲಿಕಾರ್ಜುನ ಕಾಗಿ, ವಿನಾಯಕ ಮತ್ತು ಸಂಗಮೇಶ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT