ADVERTISEMENT

80 ಕೆ.ಜಿ ಭಾರ ಜಗ್ಗುವ ಮಿನಿ ಟ್ರ್ಯಾಕ್ಟರ್ ತಯಾರಿಸಿದ ವಿದ್ಯಾರ್ಥಿ!

ತಾನೇ ತಯಾರಿಸಿದ ಮಿನಿ ಟ್ರ್ಯಾಕ್ಟರ್‌ ಅನ್ನು ಶಾಲೆಗೆ ಉಡುಗೊರೆಯಾಗಿ ನೀಡಿದ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:10 IST
Last Updated 4 ಮಾರ್ಚ್ 2026, 5:10 IST
ತಾನು ತಯಾರಿಸಿದ ಮಿನಿ ಟ್ರ್ಯಾಕ್ಟರ್ ಅನ್ನು ಶಾಲೆಗೆ ಉಡುಗೊರೆಯಾಗಿ ನೀಡಿದ ವಿದ್ಯಾರ್ಥಿ ಶ್ರೀಶೈಲ ಕಲಗೌಡ ಜಗದೇವ
ತಾನು ತಯಾರಿಸಿದ ಮಿನಿ ಟ್ರ್ಯಾಕ್ಟರ್ ಅನ್ನು ಶಾಲೆಗೆ ಉಡುಗೊರೆಯಾಗಿ ನೀಡಿದ ವಿದ್ಯಾರ್ಥಿ ಶ್ರೀಶೈಲ ಕಲಗೌಡ ಜಗದೇವ   

ಅಥಣಿ: ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ತಾಲ್ಲೂಕಿನ ಸತ್ತಿ ಗ್ರಾಮದ ಬಸವಶ್ರೀ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಪಾಟೀಲ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಶ್ರೀಶೈಲ ಕಲಗೌಡ ಜಗದೇವ 80 ಕೆಜಿ ಭಾರ ಹೊರುವ ಮಿನಿ ಟ್ರ್ಯಾಕ್ಟರ್ ಅನ್ನು ತಯಾರಿಸಿದ್ದಾನೆ. 

ವಿದ್ಯಾರ್ಥಿಯು ಮನೆಯಲ್ಲಿರುವ ಪ್ಲಾಸ್ಟಿಕ್ ಪೈಪ್, ಪ್ಲೈವುಡ್, ಸೈಕಲ್ ಟ್ಯೂಬ್, ರಟ್ಟು, ಡ್ರಿಲ್ ಮಷೀನ್, ವೈರ್ ತುಂಡುಗಳು ಇನ್ನಿತರ ವಸ್ತುಗಳನ್ನು ಉಪಯೋಗಿಸಿಕೊಂಡು ಟ್ರ್ಯಾಕ್ಟರ್ ತಯಾರಿಸಿದ್ದಾನೆ. ಟ್ರ್ಯಾಕ್ಟರ್‌ ವಿಶೇಷ ವಿನ್ಯಾಸದ ಮೂಲಕ ತಯಾರಿಸಿದ್ದಾನೆ. ಅದರಲ್ಲಿ ಬ್ಲೂಟೂಥ್‌ ಮೂಲಕ ಸೌಂಡ್ ವ್ಯವಸ್ಥೆ, ಲೈಟಿಂಗ್ ವ್ಯವಸ್ಥೆ, ಹಿಂದೆ ಮುಂದೆ ಚಲಿಸುವ ಸೌಲಭ್ಯ ಸೇರಿದಂತೆ ಅನೇಕ ವಿಶೇಷತೆಗಳಿವೆ. 

ಮನೆಯಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಈ ಟ್ರ್ಯಾಕ್ಟರ್ ಅನ್ನು ಸಿದ್ಧಪಡಿಸಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಶಿಕ್ಷಕಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಶ್ರೀಶೈಲ ಜೀವನದಲ್ಲಿ ಏನಾದರೂ ಹೊಸದನ್ನು ಮಾಡಬೇಕು ಎನ್ನುವ ತವಕದಲ್ಲಿ ಇದ್ದಾನೆ. ಭವಿಷ್ಯದಲ್ಲಿ ವಿಜ್ಞಾನಿ ಆಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ’ ಎಂದು ವಿದ್ಯಾರ್ಥಿಯ ಸಾಧನೆಯ ಕುರಿತು ಸಂಸ್ಥೆಯ ಅಧ್ಯಕ್ಷ ಚಿದಾನಂದ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿರುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು 80 ಕೆಜಿ ಭಾರ ಸಾಗಿಸುವ ಟ್ರ್ಯಾಕ್ಟರ್ ಅನ್ನು ತಯಾರಿಸಿದ್ದೇನೆ. ಮುಂದೆ 500 ಕೆ.ಜಿ ಭಾರ ಹೊತ್ತೊಯ್ಯುವ ಟ್ರ್ಯಾಕ್ಟರ್ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದೇನೆ.
ಶ್ರೀಶೈಲ ಜಗದೇವ, ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.