ADVERTISEMENT

ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು: ಕವಟಗಿಮಠ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 2:49 IST
Last Updated 5 ಡಿಸೆಂಬರ್ 2025, 2:49 IST
ಬೆಳಗಾವಿಯ ಲಿಂಗರಾಜ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವವನ್ನು ಮಹಾಂತೇಶ ಕವಟಗಿಮಠ ಉದ್ಘಾಟಿಸಿದರು
ಬೆಳಗಾವಿಯ ಲಿಂಗರಾಜ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವವನ್ನು ಮಹಾಂತೇಶ ಕವಟಗಿಮಠ ಉದ್ಘಾಟಿಸಿದರು   

ಬೆಳಗಾವಿ: ‘ವಿದ್ಯಾರ್ಥಿಗಳು ರಾಷ್ಟ್ರದ ಬಹುದೊಡ್ಡ ಆಸ್ತಿ. ಅವರು ಗುಣಾತ್ಮಕ ಶಿಕ್ಷಣ ಪಡೆಯುವ ಜತೆಗೆ, ಸಂಸ್ಕಾರವಂತರಾಬೇಕು’ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.

ಇಲ್ಲಿನ ಲಿಂಗರಾಜ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ–ಕೈರೋಸ್‌ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಸಾಕಷ್ಟು ಓದಿ ಸಂಸ್ಕಾರವಂತರಾಗದೆ ಹೋದರೆ, ಬದುಕಿಗೆ ಅರ್ಥ ಬರುವುದಿಲ್ಲ. ಜೀವನ ರೂಪಿಸಿದ ತಂದೆ–ತಾಯಿ, ಗುರುಗಳನ್ನು ಸದಾ ಸ್ಮರಿಸಬೇಕು. ಇಂದು ನೈತಿಕ ಶಿಕ್ಷಣದ ಕೊರತೆಯಿಂದ ಸಮಾಜ ದಾರಿ ತಪ್ಪುತ್ತಿದೆ. ಅದಕ್ಕೆ ಜೀವನಕ್ಕೆ ಸಂಸ್ಕಾರ ಅಗತ್ಯವಾಗಿದೆ’ ಎಂದರು.

ADVERTISEMENT

ಬೆಳಗಾವಿ ನಗರ ಬಿಇಒ ರವಿ ಭಜಂತ್ರಿ ಮಾತನಾಡಿದರು. 

ಪದವಿ ವಿಭಾಗದ ಪ್ರಾಚಾರ್ಯ ಎಚ್‌.ಎಸ್‌.ಮೇಲಿನಮನಿ, ಹರಿಲಿನ್ ಷಾ, ಸಾನ್ವಿ ಕಾಲಕುಂದ್ರಿ ಇದ್ದರು. ಪಿಯು ವಿಭಾಗದ ಪ್ರಾಚಾರ್ಯೆ ಗಿರಿಜಾ ಹಿರೇಮಠ ಸ್ವಾಗತಿಸಿದರು. ಎಸ್‌.ಮಲ್ಘಾನ್ ವಂದಿಸಿದರು. ಕೃಷಿಕಾ ಮಿಶ್ರಾ ಮತ್ತು ಸುಮಿತ ಕಾಂಬ್ಳೆ ನಿರೂಪಿಸಿದರು.

Quote - ನಾವು ಯಾವ ಧರ್ಮದಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ. ಬದಲಿಗೆ ಸಿಕ್ಕ ಅವಕಾಶ ಬಳಸಿಕೊಂಡು ಅಗಾಧವಾದ ಸಾಧನೆ ಮಾಡಿದರೆ ಸಮಾಜಕ್ಕೆ ಮಾದರಿಯಾಗುತ್ತೇವೆ ಮಹಾಂತೇಶ ಕವಟಗಿಮಠ ನಿರ್ದೇಶಕ ಕೆಎಲ್‌ಇ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.