
ವೀರೇಶ್ವರ ಸ್ವಾಮೀಜಿ
ಚನ್ನಮ್ಮನ ಕಿತ್ತೂರು: ‘ಕಾರ್ಖಾನೆಗೆ ಕಬ್ಬು ಪೂರೈಸಿದ ರೈತನಿಗೆ ತೂಕದಲ್ಲಿ ಮೋಸವಾಗಿದ್ದು, ಗಮನಕ್ಕೆ ತಂದರೆ ₹1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಈಗೆ ಎಲ್ಲಿದ್ದಾರೆ’ ಎಂದು ದೇಗುಲಹಳ್ಳಿ ಹಾಗೂ ಅಂಬಡಗಟ್ಟಿ ಗುರು ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಪ್ರಶ್ನಿಸಿದ್ದಾರೆ.
‘ಕಲಬುರಗಿ ಬಳಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಿದ್ದಸಿರಿ ಸಕ್ಕರೆ ಕಾರ್ಖಾನೆಯ ತೂಕದಲ್ಲಿ ಪ್ರತಿ ವಾಹನಕ್ಕೆ ಒಂದು ಟನ್ ವ್ಯತ್ಯಾಸವಾಗಿದೆ. ಇದನ್ನು ಅಲ್ಲಿಯ ರೈತರು ಬಹಿರಂಗವಾಗಿ ಹೇಳಿದ್ದಾರೆ. ಆ ಹೇಳಿಕೆ ನೀಡಿದ ರೈತನಿಗೆ ಸಚಿವರು ₹1 ಲಕ್ಷ ಬಹುಮಾನ ನೀಡಬೇಕು ಮತ್ತು ಕಾರ್ಖಾನೆ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿ ಆಗ್ರಹಿಸಿದರು.
‘ಅಲ್ಲಿಯ ರೈತರೊಬ್ಬರು 11 ಟ್ರಿಪ್ ಕಾರ್ಖಾನೆಗೆ ಕಬ್ಬು ಪೂರೈಸಿದ್ದಾರೆ. ಬೇರೆ ಕಡೆಗೆ ತೂಕ ಮಾಡಿಕೊಂಡ ಹೋದ ವಾಹನವು ಕಾರ್ಖಾನೆಯಲ್ಲಿ ಒಂದು ಟನ್ ಕಡಿಮೆ ತೂಗಿದೆ. ಈ ರೀತಿ ವಂಚಿಸಿ, ರೈತರ ಕುತ್ತಿಗೆಯ ಮೇಲೆ ಕಾಲಿಟ್ಟರೆ ಆತ ಬದುಕುವುದಾದರೂ ಹೇಗೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.