ADVERTISEMENT

ತಾಳಿಕೋಟೆ ಬಿ.ಪಿ.ಇಡಿ ಕಾಲೇಜು ಚಾಂಪಿಯನ್‌ಶಿಪ್‌

ಆರ್‌ಸಿವಿ: ಅಂತರ್ ಕಾಲೇಜು ಏಕವಲಯ ಕೊಕ್ಕೊ ಟೂರ್ನಿ  

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 9:33 IST
Last Updated 27 ಫೆಬ್ರುವರಿ 2026, 9:33 IST
ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆತಿಥ್ಯದಲ್ಲಿ ಜರುಗಿದ ಅಂತರ ಕಾಲೇಜು ಏಕವಲಯ ಪುರುಷರ ಕೊಕ್ಕೊ ಪಂದ್ಯದಲ್ಲಿ ಚಾಂಪಿಯನ್‌ಶಿಪ್ ಪಡೆದ ವಿಜಯಪುರ ಜಿಲ್ಲೆಯ ತಾಳಿಕೋಟೆ ದೈಹಿಕ ಶಿಕ್ಷಣ ಮಹಾವಿದ್ಯಾಲಯ ತಂಡಕ್ಕೆ ಸಂಸ್ಥೆಯ ಅಧ್ಯಕ್ಷ ಆರ್.ಪಿ. ಸೋನವಾಲಕರ ಟ್ರೋಫಿ ನೀಡಿದರು 
ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆತಿಥ್ಯದಲ್ಲಿ ಜರುಗಿದ ಅಂತರ ಕಾಲೇಜು ಏಕವಲಯ ಪುರುಷರ ಕೊಕ್ಕೊ ಪಂದ್ಯದಲ್ಲಿ ಚಾಂಪಿಯನ್‌ಶಿಪ್ ಪಡೆದ ವಿಜಯಪುರ ಜಿಲ್ಲೆಯ ತಾಳಿಕೋಟೆ ದೈಹಿಕ ಶಿಕ್ಷಣ ಮಹಾವಿದ್ಯಾಲಯ ತಂಡಕ್ಕೆ ಸಂಸ್ಥೆಯ ಅಧ್ಯಕ್ಷ ಆರ್.ಪಿ. ಸೋನವಾಲಕರ ಟ್ರೋಫಿ ನೀಡಿದರು    

ಮೂಡಲಗಿ: ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆತಿಥ್ಯದಲ್ಲಿ ಗುರುವಾರ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಂತರ ಕಾಲೇಜು ಏಕವಲಯ ಪುರುಷರ ಕೊಕ್ಕೊ ಟೂರ್ನಿಯಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ ದೈಹಿಕ ಶಿಕ್ಷಣ ಮಹಾವಿದ್ಯಾಲಯ ತಂಡವು ಮೂಡಲಗಿಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ ತಂಡವನ್ನು 9–3 ಅಂಕಗಳ ಅಂತರದಿಂದ ಪರಾಭವಗೊಳಿಸಿ ಚಾಂಪಿಯನ್‌ಶಿಪ್‌ ಪಡೆದುಕೊಂಡಿತು. ಮೂಡಲಗಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ತಂಡವು ರನ್ನರ್‌ಅಪ್‌ ಆಯಿತು.

ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸವದತ್ತಿಯ ಬೆಳ್ಳುಬ್ಬಿ ಕಾಲೇಜು ತಂಡವು ಕಲ್ಲೋಳಿಯ ಎಸ್‌ಆರ್‌ಇಎಸ್‌ ಕಾಲೇಜು ತಂಡವನ್ನು 8–1 ಅಂಕಗಳ ಅಂತರದಿಂದ ಪರಾಭವಗೊಳಿಸಿ ತೃತೀಯ ಸ್ಥಾನ ಪಡೆಯಿತು.

ಮೂಡಲಗಿಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಶ್ರೀಶೈಲ್‌ ಹುಣಶ್ಯಾಳ ಅತ್ಯುತ್ತಮ ಅಂಕಣ ಓಟಗಾರ, ಸವದತ್ತಿ ಎಸ್‌ವಿಎಸ್‌ ಕಾಲೇಜಿನ ವಿಜಯಕುಮಾರ ಗಾಳಗಿನ್ ಅತ್ಯುತ್ತಮ ಹಿಡಿತಗಾರ ಹಾಗೂ ತಾಳಿಕೋಟಿಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಧರಮಣ್ಣಾ ಉನ್ನಿ ಸರ್ವೋತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.

ADVERTISEMENT

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಿಂದ 7 ತಂಡಗಳು ಭಾಗವಹಿಸಿದ್ದವು.

‌ ತಹಶೀಲ್ದಾರ್ ಶ್ರೀಶೈಲ್ ಗುಡಮೆ, ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ನಿರ್ದೇಶಕ ಶಿವು ಹೊಸೂರ, ಕಾಲೇಜು ಆಡಳಿತಾಧಿಕಾರಿ ಎಸ್.ಎಲ್. ಚಿತ್ರಗಾರ, ಸಂಸ್ಥೆಯ ಉಪಾಧ್ಯಕ್ಷ ಆರ್.ಪಿ. ಸೋನವಾಲಕರ, ನಿರ್ದೇಶಕ ಶಿವು ಹೊಸೂರ, ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಕೆ. ಕಂಣವಾಡಿ, ಕಾಲೇಜು ಆಡಳಿತಾಧಿಕಾರಿ ಎಸ್.ಎಲ್. ಚಿತ್ರಗಾರ, ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಮಹೇಶ ಕಂಬಾರ, ಸಂಘಟನಾ ಸಮಿತಿಯ ಎ.ಎಸ್. ಮೀಸಿನಾಯಿಕ, ಪಿ.ಬಿ. ಚೌಡಕಿ, ಬಿ.ಎಸ್.ಕಂಬಾರ, ಪವನಕುಮಾರ ಕೆ, ಎಲ್.ಪಿ. ಹಿಡಕಲ್‌, ಎಂ.ಎಸ್. ಕುಂದರಗಿ, ಬಿ.ಕೆ. ಬಡಗಣ್ಣವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.