
ಹುಕ್ಕೇರಿ: ‘ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವವರೇ ಶಿಕ್ಷಕರು. ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಿ ದೇಶ ಕಟ್ಟುವ ಕಾರ್ಯ ಮಾಡುವುದು ಪವಿತ್ರವಾದ ಕೆಲಸ’ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹಿಡಕಲ್ ಡ್ಯಾಂನ ಶಿವಾಲಯ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ಸಾಹಿತಿ ಎಸ್.ಎಂ.ಶಿರೂರ ಅವರ ಅಭಿನಂದನಾ ಸಮಾರಂಭ ಹಾಗೂ ಶಿವಪ್ರಭೆ ಗ್ರಂಥ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ಮಾಜಿ ಸಚಿವ ಎ.ಬಿ.ಪಾಟೀಲ, ‘ಸಾಹಿತಿ ಎಸ್.ಎಂ.ಶಿರೂರ ಅವರ ಸಾಹಿತ್ಯ ಯುವ ಸಾಹಿತಿಗಳಿಗೆ ಮಾದರಿ ಆಗಲಿ’ ಎಂದರು. ಹಿರಿಯ ಸಹಕಾರಿ ಬಸವರಾಜ ಮಟಗಾರ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರಿ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ರಾಜಶೇಖರ ಇಚ್ಚಂಗಿ ಗ್ರಂಥ ಪರಿಚಯಿಸಿದರು. ಸಾಹಿತಿ ಬಸವರಾಜ ಗಾರ್ಗಿ ಅಭಿನಂದನಾ ನುಡಿ ಆಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಪಾಶ್ಚಾಪೂರದ ವಿಶ್ವಾರಾಧ್ಯ ಸ್ವಾಮೀಜಿ, ಘೋಡಗೇರಿ ಕಾಶಿನಾಥ ಸ್ವಾಮೀಜಿ, ಹತ್ತರಗಿ ಕಾರೀಮಠದ ಗುರುಸಿದ್ದ ಸ್ವಾಮೀಜಿ, ಉಳ್ಳಾಗಡ್ಡಿ-ಖಾನಾಪೂರದ ಸಿದ್ದೇಶ್ವರ ಸ್ವಾಮೀಜಿ, ಯಮಕನಮರಡಿ ಹುಣಸಿಕೊಳ್ಳಮಠದ ಸಿದ್ದಬಸವ ದೇವರು, ಸಾಹಿತಿ ಎಲ್.ವಿ. ಪಾಟೀಲ, ಪ್ರಕಾಶ ಅವಲಕ್ಕಿ, ಪ್ರಕಾಶ ಹೊಸಮನಿ, ಮಹಾವೀರ ನಿಲಜಗಿ, ಆರ್. ಕರುಣಾಶೆಟ್ಟಿ, ಮುಖ್ಯ ಶಿಕ್ಷಕ ಬಿ.ಆರ್. ಸರನೋಬತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.