ADVERTISEMENT

ಸೋನೋಲಿ: ದೇವಸ್ಥಾನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 3:24 IST
Last Updated 14 ಫೆಬ್ರುವರಿ 2024, 3:24 IST
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೋನೋಲಿ ಗ್ರಾಮದಲ್ಲಿ ಸೋಮವಾರ ಬ್ರಹ್ಮಲಿಂಗ ಮಂದಿರವನ್ನು ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿ, ಪೂಜೆ ಸ‌ಲ್ಲಿಸಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೋನೋಲಿ ಗ್ರಾಮದಲ್ಲಿ ಸೋಮವಾರ ಬ್ರಹ್ಮಲಿಂಗ ಮಂದಿರವನ್ನು ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿ, ಪೂಜೆ ಸ‌ಲ್ಲಿಸಿದರು   

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೋನೋಲಿ ಗ್ರಾಮದಲ್ಲಿ ನಿರ್ಮಿಸಿದ ಬ್ರಹ್ಮಲಿಂಗ ಮಂದಿರದ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಅವಕಾಶ ನಮಗೆ ಸಿಕ್ಕಿದೆ. ಸಹೋದರಿ ಲಕ್ಷ್ಮಿ ಹೆಬ್ಬಾಳಕರ ಅವರು ಶಾಸಕರಾದ ನಂತರ ಕ್ಷೇತ್ರದ ಅಭಿವೃದ್ಧಿಯ ದಿಕ್ಕು ಬದಲಾಗಿದೆ. ಸಚಿವರಾದ ನಂತರ ಎಲ್ಲರ ಸಹಕಾರದಿಂದ ಇನ್ನಷ್ಟು ಯೋಜನೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

ಗ್ರಾಮದ ಹಿರಿಯರಾದ ಮನೋಹರ್ ಬೆಳಗಾಂವ್ಕರ್, ಮಾರುತಿ ಪಾಟೀಲ, ಗುರುನಾಥ್ ಪಾಟೀಲ, ಬಾಳು ಜಾಂಗ್ರೂಚೆ, ಶಿವಾಜಿ ಕೆ. ಗುರುನಾಥ್ ಜಾಂಗ್ರೂಚೆ, ನಾರಾಯಣ ಪಾಟೀಲ, ಮಾರುತಿ ಕನಗುಟ್ಕರ್, ಭರ್ಮಾ ಪಾಟೀಲ ಹಾಗೂ ಮಂದಿರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.