ಬೈಲಹೊಂಗಲ: ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಶನಿವಾರ ನಡೆದ 'ಮಹಿಳಾ ಸಂಸ್ಕೃತಿ ಹಬ್ಬ' ನೋಡುಗರನ್ನು ರಂಜಿಸಿತು.
ಮಹಿಳಾ ಸಂಸ್ಕೃತಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿನಿಯರು ಜಾನಪದ, ದೇಶಭಕ್ತಿ, ಗ್ರಾಮೀಣ ಸೊಗಡನ್ನು ಬಿಂಬಿಸುವ ರೂಪಕಗಳನ್ನು ಪ್ರದರ್ಶಿಸಿದರು. ಭಾರತೀಯ ಸಂಸ್ಕೃತಿ, ಪರಂಪರೆ ಸಾರುವ ಭರತನಾಟ್ಯ, ಯೋಗ, ನೃತ್ಯ, ಲಾವಣಿ ಪದ, ಹಾಸ್ಯ ನೃತ್ಯ, ವಿವಿಧ ಬಗೆಯ ನೃತ್ಯಗಳ ಮೂಲಕ ಮೆರುಗು ತಂದರು. ಸಮೂಹ ಗಾಯನ, ನೃತ್ಯ ಆಕರ್ಷಿಸಿತು.
ಇಳಕಲ್ ಸೀರೆಯಲ್ಲಿ ಆಕರ್ಷಣೆ: ಅಕ್ಕನ ಅಂಗಳದಲ್ಲಿ ನಡೆದ ಮಹಿಳಾ ಸಂಸ್ಕೃತಿ ಹಬ್ಬದ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿನಿಯರು, ಉಪನ್ಯಾಸಕಿಯರು ಭಾರತೀಯ ಸಂಸ್ಕೃತಿಯಲ್ಲಿ ಇಳಕಲ್ ಸೀರೆ ತೊಟ್ಟು ಅತ್ಯಾಕರ್ಷಿಸಿದರು. ಇಳಕಳ್ ಸೀರೆ ಹಾಗೂ ಗ್ರಾಮೀಣ ಉಡುಗೆಯ ಮಹತ್ವದ ಕುರಿತು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ್ ಮಹಿಳಾ ಸಂಸ್ಕೃತಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ‘ಮಹಿಳೆಯರ ಮೇಲೆ ಶೋಷಣೆ ನಿಲ್ಲದಿರುವುದು ವಿಷಾದನೀಯ’ ಎಂದರು.
ಮುಖ್ಯ ಅತಿಥಿ, ಉಪವಿಭಾಗಾಧಿಕಾರಿ ಪ್ರಭಾವತಿ ಪಕೀರಪೂರ ಮಾತನಾಡಿ, ‘ಮಹಿಳಾ ಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಇಲ್ಲ. ಮಹಿಳೆಯರು ಶಿಕ್ಷಣ ಕಲಿತು ಉನ್ನತ ಸ್ಥಾನ ಪಡೆದು ಎಲ್ಲರಿಗೂ ಸ್ಪೂರ್ತಿಯಾಗಬೇಕು’ ಎಂದರು.
ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಅಪರ್ಣಾ ಗಣಾಚಾರಿ, ಕಿರುತೆರೆ ನಟಿ ರಾಜೇಶ್ವರಿ ದೇಶಪಾಂಡೆ, ಸರಿಗಮಪ ಸೀಸನ್ ಸ್ಪರ್ಧೆ ಅನಘಾ ಪಾಟೀಲ ವೇದಿಕೆಯಲ್ಲಿದ್ದರು. ಶ್ರೇಯಾ ಭದ್ರಶೆಟ್ಟಿ ಸ್ವಾಗತಿಸಿದಳು. ಮೇಘಾನಾ ಅಂಗಡಿ, ನೀಶಾ ಮುಕಂದ ನಿರೂಪಿಸಿದರು. ವಿಜಯಲಕ್ಷ್ಮಿ ಉಳವಿ ವಂದಿಸಿದಳು.
ವಿದ್ಯಾರ್ಥಿನೀಯರಿಂದ ಸಮೂಹ ನೃತ್ಯ, ಗಾಯನ ಗ್ರಾಮೀಣ ಉಡುಗೆಯ ಮಹತ್ವ ಸಾರಿದ ವಿದ್ಯಾರ್ಥಿನಿಯರು
ವಿದ್ಯಾರ್ಥಿನಿಯರಲ್ಲಿ ಭಾರತೀಯ ಸಂಸ್ಕೃತಿ ಸಂಸ್ಕಾರ ಪರಂಪರೆ ಆಚರಣೆ ಬೆಳೆಸುವುದರ ಜೊತೆ ಸಂಸ್ಕಾರದ ಶಿಕ್ಷಣ ನೀಡಲಾಗುತ್ತಿದೆಡಾ.ಸಿ.ಬಿ.ಗಣಾಚಾರಿ ಪ್ರಾಚಾರ್ಯ
ಮಹಿಳಾ ಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಇಲ್ಲ. ಮಹಿಳೆಯರು ಶಿಕ್ಷಣ ಕಲಿತು ಉನ್ನತ ಸ್ಥಾನ ಪಡೆದು ಎಲ್ಲರಿಗೂ ಸ್ಪೂರ್ತಿಯಾಗಬೇಕುಪ್ರಭಾವತಿ ಫಕೀರಪೂರ ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.