ADVERTISEMENT

ಬೆಳಗಾವಿ ಪುಟದ ಅಡ್ಮಿನ್‌ಗಳಿಗೆ ಮರಾಠಿ ಪುಟದಿಂದ ಮನೆಗೆ ನುಗ್ಗಿ ಹೊಡೆವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 5:05 IST
Last Updated 29 ಅಕ್ಟೋಬರ್ 2021, 5:05 IST
ಬೆಳಗಾವಿ ಫೇಸ್‌ಬುಕ್ ಪುಟ
ಬೆಳಗಾವಿ ಫೇಸ್‌ಬುಕ್ ಪುಟ   

ಬೆಳಗಾವಿ: ಕನ್ನಡ ನಾಡು–ನುಡಿಗೆ ಸಂಬಂಧಿಸಿದಂತೆ ಪೋಸ್ಟ್‌ಗಳನ್ನು ಹಾಕುವ ಕಾರ್ಯದಲ್ಲಿ ನಿರತವಾಗಿರುವ ‘ಬೆಳಗಾವಿ ಪುಟ’ದ ಅಡ್ಮಿನ್‌ಗಳ ವಿಳಾಸ ಸಿಕ್ಕರೆ ಅವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ‘ರಾಯಲ್‌ ಬೆಳಗಾಂವಕರ್’ ಎನ್ನುವ ಮರಾಠಿ ಪರ ಪುಟದವರು ಪೋಸ್ಟ್‌ ಹಾಕಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

ಆ ಪೋಸ್ಟ್‌ಗೆ ಮತ್ತು ನಾಡದ್ರೋಹಿ ಚಟುವಟಿಕೆಗಳಿಗೆ ಸಾಮಾಜಿಕ ಮಾಧ್ಯಮ ಬಳಸಿಕೊಂಡಿರುವುದಕ್ಕೆ ಕನ್ನಡ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

‘ಬೆಳಗಾವಿಯಲ್ಲಿ ನಾವು ಕನ್ನಡಪರ ಕೆಲಸ ಮಾಡಿದರೆ ಅದು ಹಿಂದೂ ಧರ್ಮ ಒಡೆಯುವ ಕೆಲಸವಂತೆ. ಅದಕ್ಕೆ ಅಡ್ಮಿನ್‌ಗಳಿಗೆ ಬೆದರಿಕೆ ಹಾಕಲಾಗಿದೆ.ಐದು ವರ್ಷಗಳಿಂದ ತುಂಬಾ ಜನರು ನಮಗೆ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ. ಆದರೆ, ಅದ್ಯಾವುದಕ್ಕೂ ನಾವು ಅಂಜದೆ, ಕನ್ನಡಪರ ಕೆಲಸವನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಬಂದಿದ್ದೇವೆ. ಯಾವುದೇ ಆಸೆ–ಆಮಿಷಗಳಿಗೆ ಒಳಗಾಗದೆ ಕನ್ನಡಪರ ಕಾರ್ಯ ಮಾಡುತ್ತಿದ್ದೇವೆ’ ಎಂದು ಅಡ್ಮಿನ್‌ ಕಿರಣ ಮಾಳನ್ನವರ ಪೋಸ್ಟ್ ಹಾಕಿ ತಿರುಗೇಟು ನೀಡಿದ್ದಾರೆ.

ADVERTISEMENT

‘ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರಿ, ನಾಡು–ನುಡಿಯ ಪರವಾದ ಕೆಲಸವನ್ನು ನಿಲ್ಲಿಸುವುದಿಲ್ಲ’ ಎಂದಿದ್ದಾರೆ.

ಬೆದರಿಕೆ ಹಾಕಿದ ಪುಟದ ಬಗ್ಗೆ ಕ್ರಮಕ್ಕೆ ಕೋರಿ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.