ADVERTISEMENT

ಬೆಳಗಾವಿ: ಒಂದೇ ಆವರಣದಲ್ಲಿನ 3 ಮರಾಠಿ ಶಾಲೆಗಳಲ್ಲಿರುವ 64 ಮಕ್ಕಳಿಗೆ 8 ಶಿಕ್ಷಕರು!

ಬೆಳಗಾವಿಯಲ್ಲಿ ಒಂದೇ ಆವರಣದಲ್ಲಿವೆ ಮೂರು ಮರಾಠಿ ಶಾಲೆ, ಮಾನವ ಸಂಪನ್ಮೂಲ ವ್ಯರ್ಥ ಆರೋಪ

ಇಮಾಮ್‌ಹುಸೇನ್‌ ಗೂಡುನವರ
Published 21 ಜೂನ್ 2022, 19:30 IST
Last Updated 21 ಜೂನ್ 2022, 19:30 IST
ಬೆಳಗಾವಿಯ ರಿಸಾಲ್ದಾರ್‌ ಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 22/ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ರಿಸಾಲ್ದಾರ್‌ ಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 22/ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಒಂದೆಡೆ ಗಡಿಭಾಗದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ. ಆದರೆ, ಇಲ್ಲಿನ ರಿಸಾಲ್ದಾರ್‌ ಗಲ್ಲಿಯಲ್ಲಿ ಒಂದೇ ಆವರಣದಲ್ಲಿರುವ ಮೂರು ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಗಳಲ್ಲಿ 64 ವಿದ್ಯಾರ್ಥಿಗಳಷ್ಟೇ ಇದ್ದರೂ, ಎಂಟು ಶಿಕ್ಷಕರನ್ನು ನಿಯೋಜಿಸಿರುವುದು ಕನ್ನಡಿಗರ ಆಕ್ಷೇಪಕ್ಕೆ ಕಾರಣವಾಗಿದೆ.

‘ಬೆಳಗಾವಿ ಜಿಲ್ಲೆಯೊಂದರಲ್ಲೇ 5 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿ ಇವೆ. ಕನ್ನಡ ಮಾಧ್ಯಮದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಆದರೆ, ಈ ಮರಾಠಿ ಶಾಲೆಗಳಲ್ಲಿ ಮಾನವ ಸಂಪನ್ಮೂಲ ವ್ಯರ್ಥವಾಗುತ್ತಿದೆ. ಮೂರು ಶಾಲೆಗಳನ್ನೂ ವಿಲೀನಗೊಳಿಸಿ, ಹೆಚ್ಚುವರಿ ಶಿಕ್ಷಕರನ್ನು ವರ್ಗಾಯಿಸಬೇಕು’ ಎನ್ನುವ ಒತ್ತಾಯ ಕೇಳಿಬಂದಿದೆ.

ಯಾವ್ಯಾವ ಶಾಲೆಗಳು?:ಇಲ್ಲಿನ ರಿಸಾಲ್ದಾರ್‌ ಗಲ್ಲಿಯಲ್ಲಿ 1861ರಲ್ಲೇ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 22 ಸ್ಥಾಪನೆಯಾಗಿದೆ. ಇಲ್ಲಿ 800ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ದಾಖಲಾತಿ ಗಣನೀಯವಾಗಿ ಕುಸಿದಿದೆ. ಪಕ್ಕದಲ್ಲೇ ಇದ್ದ ಗೋಂಧಳಿ ಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 20 ಹಾಗೂ ರಾಮದೇವ ಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 29ರಲ್ಲೂ ಕೆಲವೇ ಮಕ್ಕಳಿದ್ದರು. ಅವುಗಳಿಗೆ ಸ್ವಂತ ಕಟ್ಟಡ ಇಲ್ಲದ್ದರಿಂದ ರಿಸಾಲ್ದಾರ್‌ ಗಲ್ಲಿ ಶಾಲೆಗೇ ಸ್ಥಳಾಂತರಿಸಲಾಗಿದೆ.

ADVERTISEMENT

ಇಬ್ಬರನ್ನೂ ಬೇರಡೆ ನಿಯೋಜಿಸುತ್ತೇವೆ: ಬಿಇಒ

‘ಕನ್ನಡಹೊರತಾಗಿಬೇರೆಮಾಧ್ಯಮವಿದ್ದರೆ, ಅಲ್ಲಿ ಕನ್ನಡಭಾಷಾ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಬೇಕೆನ್ನುವ ನಿಯಮವಿದೆ. ಆ ಪ್ರಕಾರ ಮೂರು ಶಾಲೆಗಳಿಗೆ ತಲಾ ಒಬ್ಬರು ಕನ್ನಡ ಭಾಷಾ ಶಿಕ್ಷಕರನ್ನು ನಿಯೋಜಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕುಸಿದಿರುವುದರಿಂದ ಮೂರು ಶಾಲೆಗಳಲ್ಲಿ ತಲಾ ಒಬ್ಬರು ಮರಾಠಿ ಶಿಕ್ಷಕರನ್ನು ಉಳಿಸಿಕೊಂಡು, ಉಳಿದಿಬ್ಬರನ್ನು ಕೂಡಲೇ ಬೇರೆ ಶಾಲೆಗೆ ನಿಯೋಜಿಸುತ್ತೇವೆ’ ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಎಷ್ಟು ವಿದ್ಯಾರ್ಥಿಗಳು, ಶಿಕ್ಷಕರು?

ಶಾಲೆ;ವಿದ್ಯಾರ್ಥಿಗಳು;ಶಿಕ್ಷಕರು

ರಿಸಾಲ್ದಾರ್‌ ಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ–22;40;3

ಗೋಂಧಳಿ ಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ–20;13;2

ರಾಮದೇವ ಗಲ್ಲಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ–29;11;3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.