ADVERTISEMENT

ಹಾಳಾದ ಬೈಲಹೊಂಗಲ ಪಟ್ಟಣದ ರಸ್ತೆಗಳು; ಬೈಪಾಸ್ ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 8:20 IST
Last Updated 18 ಜುಲೈ 2022, 8:20 IST
ಬೈಲಹೊಂಗಲ ಪಟ್ಟಣದ ಮುಖ್ಯ ರಸ್ತೆಯ ಸ್ಥಿತಿ
ಬೈಲಹೊಂಗಲ ಪಟ್ಟಣದ ಮುಖ್ಯ ರಸ್ತೆಯ ಸ್ಥಿತಿ   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಎಲ್ಲ 27 ವಾರ್ಡ್‌ಗಳಲ್ಲಿಯೂ ರಸ್ತೆಗಳು ಸಂಪೂರ್ಣ ಹಾಳಾಗಿವೆ. ತಕ್ಷಣ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಸೋಮವಾರ ರಸ್ತೆ ತಡೆ ನಡೆಸಿದರು.

ಬೈಲಹೊಂಗಲ ಪಟ್ಟಣದ ಧಾರವಾಡ- ಸವದತ್ತಿ ಮಾರ್ಗದ ಬೈಪಾಸ್ ರಸ್ತೆಯ ಮೇಲೆ ಧರಣಿ ಕುಳಿತ ಪ್ರತಿಭಟನಾಕಾರರು, ಸ್ಥಳೀಯ ಶಾಸಕ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧವೂ ಕಿಡಿ ಕಾರಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಹಲವು ನಾಗರಿಕರು ಎರಡು ತಾಸಿನಿಂದ ರಸ್ತೆ ಮೇಲೆ ಕುಳಿತಿದ್ದಾರೆ.

ADVERTISEMENT

ಮುಖ್ಯ ರಸ್ತೆ ಬಂದ್ ಆಗಿದ್ದರಿಂದ ಸವದತ್ತಿ, ಧಾರವಾಡ ಮಾರ್ಗದಲ್ಲಿ ಸಂಚರಿಸುವ ಹಲವು ವಾಹನಗಳ ದಾರಿಯಲ್ಲಿ ನಿಂತಿವೆ. ಪ್ರಯಾಣಿಕರು ಪರದಾಡುವಂತಾಗಿದೆ.

ಶಾಲೆ, ಕಾಲೇಜು, ಸರ್ಕಾರಿ ಕೆಲಸಕ್ಕೆ ಹೋಗಬೇಕಾದವರು ಬಸ್ ಇಳಿದು, ಬೇರೆ ಮಾರ್ಗಗಳಲ್ಲಿ ಸಾಗುವ ವಾಹನಗಳನ್ನು ಹುಡುಕಾಡಿದರು.

ರಸ್ತೆ ದುರಸ್ತಿ ಬಗ್ಗೆ ಖಚಿತ ಉತ್ತರ ಸಿಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.