ADVERTISEMENT

ಇಬ್ಬರ ಬಂಧನ: 7 ದ್ವಿಚಕ್ರವಾಹನ ವಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 14:45 IST
Last Updated 15 ಡಿಸೆಂಬರ್ 2019, 14:45 IST
ಬೆಳಗಾವಿಯ ಗ್ರಾಮೀಣ ಠಾಣೆ ‍ಪೊಲೀಸರು ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿ ಅವರಿಂದ ₹ 2.70 ಲಕ್ಷ ಮೌಲ್ಯದ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ
ಬೆಳಗಾವಿಯ ಗ್ರಾಮೀಣ ಠಾಣೆ ‍ಪೊಲೀಸರು ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿ ಅವರಿಂದ ₹ 2.70 ಲಕ್ಷ ಮೌಲ್ಯದ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ   

ಬೆಳಗಾವಿ: ವಾಹನಗಳ ಕಳವು ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವ ಇಲ್ಲಿ ಇಲ್ಲಿನ ಗ್ರಾಮೀಣ ಠಾಣೆ ‍ಪೊಲೀಸರು, ಅವರಿಂದ ₹ 2.70 ಲಕ್ಷ ಮೌಲ್ಯದ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಖಾದರವಾಡಿ ಆಜಾದ್ ನಗರದ ನಿವಾಸಿಗಳಾದ ಅಮ್ಜದ್ ವಲೀಸಾಬ ಸನದಿ ಹಾಗೂ ಪಹೀಮ್ ಸಿಕಂದರ್ ಕರವೇಶಕರ ಬಂಧಿತರು.

ಭಾನುವಾರ ದ್ವಿಚಕ್ರವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಪಿಎಸ್‌ಐ ಕೆ.ಸಿ. ಗುರ್ಲಹೊಸೂರ ಹಾಗೂ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಕಳವು ಮಾಡಿರುವುದು ಗೊತ್ತಾಗಿದೆ. ಇಬ್ಬರೂ ಕೂಡಿಕೊಂಡು ನಗರ ಹಾಗೂ ಸುತ್ತಮುತ್ತಲಿನ ವಿವಿಧೆಡೆ ಏಳು ದ್ವಿಚಕ್ರವಾಹನಗಳನ್ನು ಕಳವು ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.