ADVERTISEMENT

ಸವದತ್ತಿ| ವಾಲ್ಮೀಕಿ ಭವನ ನಿರ್ಮಾಣಕ್ಕೆ ತೆರೆದ ಸಂಪ್‌ಗೆ ಬಿದ್ದು ಮಕ್ಕಳಿಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 8:39 IST
Last Updated 10 ಜನವರಿ 2023, 8:39 IST
ಮಕ್ಕಳ ಸಾವಿಗೆ ಕಾರಣವಾದ ಸಂಪ್‌ ಅನ್ನು ಪರಿಶೀಲಿಸುತ್ತಿರುವ ಪೊಲೀಸರು.
ಮಕ್ಕಳ ಸಾವಿಗೆ ಕಾರಣವಾದ ಸಂಪ್‌ ಅನ್ನು ಪರಿಶೀಲಿಸುತ್ತಿರುವ ಪೊಲೀಸರು.    

ಸವದತ್ತಿ (ಬೆಳಗಾವಿ ಜಿಲ್ಲೆ): ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ, ವಾಲ್ಮೀಕಿ ಭವನ ನಿರ್ಮಿಸಲು ತೆರೆದ ಸಂಪನಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಶಂಭುಲಿಂಗಪ್ಪ ಗುಡಿ ಅವರ ನಾಲ್ಕು ವರ್ಷದ ಪುತ್ರ ಶ್ಲೋಕ ಹಾಗೂ ಪ್ರಕಾಶ ಸಾಲುಂಕೆ ಅವರ ನಾಲ್ಕು ವರ್ಷದ ಪುತ್ರ ಚಿದಾನಂದ ಸಾವನ್ನಪ್ಪಿದ ಮಕ್ಕಳು.

ಶ್ರೋಕ ಮತ್ತು ಚಿದಾನಂದ

ಸವದತ್ತಿ ಸಮೀಪದ ಗುರ್ಲ ಹೊಸೂರಿನಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುತ್ತಿದೆ. ಇದಕ್ಕೆ ನೀರು ಪೂರೈಸಲು ದೊಡ್ಡ ಸಂಪ ಕಟ್ಟಿ ಹಾಗೇ ಬಾಡಲಾಗಿದೆ.

ADVERTISEMENT

ಶ್ಲೋಕ ಹಾಗೂ ಚಿದಾನಂದ ಆಟವಾಡುತ್ತ ಹೋಗಿ ಸಂಪಿನಲ್ಲಿ ಬಿದ್ದರು. ಈ ಸಂಪ ಎರಡು ಕಟ್ಟಡಗಳ ಸಣ್ಣ ಸಂದಿಯಲ್ಲಿ ಇರುವ ಕಾರಣ ಮಕ್ಕಳು ಬಿದ್ದಿದ್ದನ್ನು ಯಾರೂ ಗಮನಿಸಿಲ್ಲ.

ಇಬ್ಬರೂ ಮಕ್ಕಳು ಗ್ರಾಮದ ಪ್ರಗತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ಓದುತ್ತಿದ್ದರು. ಶಾಲೆ ಬಿಟ್ಟ ನಂತರವೂ ಮಕ್ಕಳು ಮನೆಗೆ ಬಾರದ್ದನ್ನು ಕಂಡು ಪಾಲಕರು ಆತಂಕದಿಂದ ಹುಡುಕಾಡಿದರು. ಆಗ ಮಕ್ಕಳು ಸಂಪಿನಲ್ಲಿ ಬಿದ್ದಿದ್ದು ಗೊತ್ತಾಗಿದೆ.

ಸವದತ್ತಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.