ADVERTISEMENT

ಅನಧಿಕೃತ ಆನ್‌ಲೈನ್ ಕೇಂದ್ರಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:02 IST
Last Updated 27 ಮಾರ್ಚ್ 2024, 16:02 IST
ಘಟಪ್ರಭಾ ಸಮೀಪದ ಶಿಂದಿಕುರಬೇಟದಲ್ಲಿನ ಅನಧಿಕೃತ ಆನ್‌ಲೈನ್ ಕೇಂದ್ರ
ಘಟಪ್ರಭಾ ಸಮೀಪದ ಶಿಂದಿಕುರಬೇಟದಲ್ಲಿನ ಅನಧಿಕೃತ ಆನ್‌ಲೈನ್ ಕೇಂದ್ರ   

ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಅನಧಿಕೃತ ಆನ್‌ಲೈನ್ ಕೇಂದ್ರದ ಮೇಲೆ ಗ್ರಾಮ ಆಡಳಿತಾಧಿಕಾರಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ತಂಡ ದಾಳಿ ನಡೆಸಿ ಬೀಗ ಹಾಕಿದೆ.

ಸರ್ಕಾರದಿಂದ ಅನುಮತಿ ಪಡೆಯದೇ ಅರಭಾವಿ ಗ್ರಾಮದ ಆನಂದ ಕಡ್ಡಿ ಎಂಬುವವರಿಗೆ ಸೇರಿದ ಕೇಂದ್ರ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿತ್ತು. ಆಧಾರ್, ಪಡಿತರ, ಪಾನ್ ತಿದ್ದುಪಡಿ ಹಾಗೂ ಹೊಸ ಅರ್ಜಿಗಳನ್ನು ಪಡೆಯಲು ಸಾರ್ವಜನಿಕರಿಂದ ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ಸಾರ್ವಜನಿಕರು ತಹಶೀಲ್ದಾರ್‌ಗೆ ದೂರು ನೀಡಿದ್ದರು.

ಗ್ರಾಮ ಆಡಳಿತಾಧಿಕಾರಿ ಬಿ.ಎಲ್.ಕೆಂಚರಡ್ಡಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಮೂಡಲಗಿ ಹಾಜರಿದ್ದು, ಮೇಲಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.