ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2019ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮೂರು ಮಂದಿ ಯಶಸ್ಸು ಕಂಡಿದ್ದಾರೆ.
ಆಯೋಗವು ಮಂಗಳವಾರ ಪ್ರಕಟಿಸಿರುವ ಫಲಿತಾಂಶ ಪಟ್ಟಿ ಪ್ರಕಾರ, ಹುಕ್ಕೇರಿ ತಾಲ್ಲೂಕು ಯರನಾಳದ ಪ್ರಫೈಲ್ ದೇಸಾಯಿ 532ನೇ, ರಾಯಬಾಗ ತಾಲ್ಲೂಕಿನ ಕುಡಚಿಯ ಗಜಾನನ ಬಾಲೆ 663ನೇ ಹಾಗೂ ಚಿಕ್ಕೋಡಿಯ ಪ್ರಿಯಾಂಕಾ ಕಾಂಬ್ಳೆ 670ನೇ ರ‍್ಯಾಂಕ್ ಗಳಿಸಿದ್ದಾರೆ.
ಕೆಎಲ್‌ಎಸ್–ಜಿಐಟಿಯ ಹಳೆಯ ವಿದ್ಯಾರ್ಥಿ ಆನಂದ ಕಲಾದಗಿ 446ನೇ ರ‍್ಯಾಂಕ್ ಪಡೆದಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.