
ಪ್ರಜಾವಾಣಿ ವಾರ್ತೆ
ಬೆಳಗಾವಿಯ ಅಯೋಧ್ಯಾ ನಗರದ ಹೋಟೆಲ್ ನಲ್ಲಿ ಬುಧವಾರ ರಾತ್ರಿ ಜನರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿರುವುದು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಮಧ್ಯರಾತ್ರಿ ಸಂಭ್ರಮದಿಂದ ಹೊಸ ವರ್ಷ ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ.
ವಿದ್ಯುದ್ದೀಪಗಳಿಂದ ಸಿಂಗಾರಗೊಂಡಿರುವ ನಗರದ ವಿವಿಧ ಪ್ರತಿಷ್ಠಿತ ಹೋಟೆಲ್‌ಗಳು, ಕ್ಲಬ್‌ಗಳಲ್ಲಿ ‘ನ್ಯೂ ಇಯರ್ ಪಾರ್ಟಿ’ ಜೋರಾಗಿ ನಡೆಯುತ್ತಿವೆ.
ಪಾಸ್ ಹೊಂದಿದವರನ್ನು ಒಳಬಿಡಲಾಗುತ್ತಿದ್ದು, ಜನರಿಂದ ಕಿಕ್ಕಿರಿದು ತುಂಬಿರುವ ಹೋಟೆಲ್‌ಗಳಲ್ಲಿ ಸಂಗೀತದ ಅಬ್ಬರವೂ ಜೋರಾಗಿದೆ.
ಪಾರ್ಟಿಗಳಲ್ಲಿ ಪಾಲ್ಗೊಂಡವರಿಗಾಗಿ ಸಸ್ಯಾಹಾರ ಮತ್ತು ಮಾಂಸಾಹಾರದ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಕೃಷಿಭೂಮಿಗಳಲ್ಲೂ ರಾತ್ರಿ ಪಾರ್ಟಿ ನಡೆಯುತ್ತಿವೆ.
ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.